ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಅನಾಥ ಪ್ರಜ್ಞೆ ಕಾಡುತ್ತಿದೆ

Rashmi Kasaragodu
Updated On : 25 Apr 2013, 11:21 am

ಜೋಗ್‌ಫಾಲ್ಸ್: ಸೊರಬ ಕ್ಷೇತ್ರಕ್ಕೆ ತಾಳಗುಪ್ಪ ಕ್ಷೇತ್ರವನ್ನು ಸೇರಿಸಿದ ಬಳಿಕ ಇಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಬರ ಎದುರಾಗಿದ್ದು ಜನರಿಗೆ ಅನಾಥ ಪ್ರಜ್ಞೆ ಕಾಡುತ್ತಿದೆ ಎಂದು ಸೊರಬ ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪ ತಿಳಿಸಿದರು.
 ಸಮೀಪದ ತಾಳಗುಪ್ಪ ಹೋಬಳಿಯ ಅತ್ತಿಸಾಲು, ಸೈದೂರು ಗ್ರಾಪಂ ವ್ಯಾಪ್ತಿಯ ಮತಯಾಚನೆ ಮಾಡಿ ಹಿರೇನಲ್ಲೂರಿನಲ್ಲಿ ಮಾತನಾಡಿ, ಕಳೆದ 10 ವರ್ಷಗಳಿಂದ ಸೊರಬ ಕ್ಷೇತ್ರದ ಜನರ ನಾಡಿಮಿಡಿತವನ್ನು ತಾವು ಅರಿತಿದ್ದು, ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಸೋತ ನಂತರವೂ ಜನರ ಸಮಸ್ಯೆಗಳಿಗೆ ಸ್ಪಂದಿಸಿದ್ದೇನೆ. ಬಗರ್ ಹುಕುಂ ಹೋರಾಟ, ವಿದ್ಯುತ್ ಸಮಸ್ಯೆಗಳಿಗೆ ಸ್ಪಂದಿಸುವುದನ್ನು ಮಾನ್ಯ ಬಂಗಾರಪ್ಪನವರಿಂದ ತಾವು ಕಲಿತಿದ್ದು, ಇದನ್ನೇ ಮುಂದಿನ ದಿನಗಳಲ್ಲೂ ಮುಂದುವರೆಸಿಕೊಂಡು ಹೋಗುವುದಾಗಿ ತಿಳಿಸಿದರು. ಶಿವಾನಂದ್ ಕುಗ್ವೆ, ಅನಂತ್ ಕಲುವೆ, ಶಾಂಭವಿ ಪರಮೇಶ್ವರ್, ಹುಚ್ಚಪ್ಪ, ಲೋಕೇಶ್ ಗಾಳಿಪುರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement