ಚುನಾವಣಾ ವೆಚ್ಚದ ವಿವರ ನೀಡಲು ಅಭ್ಯರ್ಥಿಗಳಿಗೆ ಆದೇಶ
ಶಿವಮೊಗ್ಗ: ಶಿವಮೊಗ್ಗ ಗ್ರಾಮಾಂತರ ವಿಧಾನ ಸಭಾ ಕ್ಷೇತ್ರ (ಪ.ಜಾ)ದಿಂದ ಸ್ಪರ್ಧಿಸಿರುವ ಅಭ್ಯರ್ಥಿಗಳು ಪ್ರತಿ ನಿತ್ಯ ಚುನಾವಣೆಗಾಗಿ ಖರ್ಚು ಮಾಡುವ ವಿವರವನ್ನು ನಿಗದಿತ ದಿನಾಂಕ ಮತ್ತು ಸಮಯಕ್ಕೆ ಚುನಾವಣಾಧಿಕಾರಿಗಳಿಗೆ ಸಲ್ಲಿಸಬೇಕು ಎಂದು ಚುನಾವಣಾ ಆಯೋಗ ಆದೇಶಿಸಿದೆ.
ಏಪ್ರಿಲ್ 27ರಂದು ಬೆಳಿಗ್ಗೆ 10.30ಕ್ಕೆ ಕರಿಯಣ್ಣ (ಕಾಂಗ್ರೆಸ್), ಬೆ.11 ಗಂಟೆಗೆ ಎಂ. ಗುರುಮೂರ್ತಿ (ಪಕ್ಷೇತರ), ಬೆ.11.20ಕ್ಕೆ ರುದ್ರಸ್ವಾಮಿ .ಕೆ. (ಪಕ್ಷೇತರ), ಬೆ.11.45ಕ್ಕೆ ಕೆ.ಜಿ. ಕುಮಾರಸ್ವಾಮಿ (ಬಿಜೆಪಿ), ಮಧ್ಯಾಹ್ನ. 12.20ಕ್ಕೆ ಎನ್.ಟಿ. ಶಿವಮೂರ್ತಿ (ಪಕ್ಷೇತರ), 12.45ಕ್ಕೆ ಕೆ.ಎನ್. ವೀರೇಶಪ್ಪ (ಬಿಎಸ್ಪಿ), 2.30ಕ್ಕೆ ಶಿವರುದ್ರಯ್ಯಸ್ವಾಮಿ (ಪಕ್ಷೇತರ), 3ಗಂಟೆಗೆ ಶಾರದಾ ಪೂರ್ಯನಾಯ್ಕ (ಜೆಡಿಎಸ್), 3.30ಕ್ಕೆ ವಿ. ಭಗವಾನ್ (ಪಕ್ಷೇತರ), 3.50ಕ್ಕೆ ಜಿ. ಬಸವಣ್ಯಪ್ಪ (ಕೆಜೆಪಿ), ಸಂಜೆ 4.30ಕ್ಕೆ ಎಲ್. ಚಂದ್ರನಾಯ್ಕ (ಜೆಡಿಯು) ಹಾಗೂ 4.45ಕ್ಕೆ ಟಿ. ಶಿವಕುಮಾರ್ (ಬಿಎಸ್ಆರ್ ಕಾಂಗ್ರೆಸ್) ಇವರುಗಳು ಚುನಾವಣಾ ತಮ್ಮ ದಿನನಿತ್ಯದ ವೆಚ್ಚದ ವಿವರವನ್ನು ಸಲ್ಲಿಸುವಂತೆ ಚುನಾವಣಾಧಿಕಾರಿಗಳು ಆದೇಶಿಸಿದ್ದಾರೆ.