ಭಗವಾನ್ ಮಹಾವೀರ ಜಯಂತಿ
ಶಿವಮೊಗ್ಗ: ಜಗತ್ತಿಗೆ ಅಹಿಂಸೆ, ಶಾಂತಿ ಸಂದೇಶ ಸಾರಿದ ಮಹಾನ್ ಮಾನವತಾವಾದಿ ಭಗವಾನ್ ಮಹಾವೀರರ 1613ನೇ ಜಯಂತಿಯನ್ನು ಮಂಗಳವಾರ ಶ್ರದ್ದಾ, ಭಕ್ತಿ- ಭಾವದಿಂದ ಆಚರಿಸಲಾಯಿತು.
ನಗರದ ಗಾಂಧಿಬಜಾರ್, ಸವಳಂಗ ರಸ್ತೆ ಸೇರಿದಂತೆ ಜಿಲ್ಲೆಯ ವಿವಿಧೆಡೆಯಿರುವ ಜೈನ ದೇವಾಲಯಗಳಲ್ಲಿ ಬೆಳಿಗ್ಗೆಯಿಂದಲೇ ಮಹಾವೀರ ಸ್ವಾಮಿಗೆ ವಿಶೇಷ ಪೂಜೆ, ಅಭಿಷೇಕ ನಡೆಯಿತು. ಪ್ರವಚನ ಮಾಲಿಕೆ, ಪ್ರಾರ್ಥನೆಗಳು ನಡೆದವು.
ಜೈನ ಸಮಾಜದವರು ತಮ್ಮ ಕುಟುಂಬ ಸದಸ್ಯರೊಂದಿಗೆ ದೇವಾಲಯಗಳಿಗೆ ಅಗಮಿಸಿ ಮಹಾವೀರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು. ಜೈನ ಯುವಕ ಮಂಡಲ, ಸಂಘಸಂಸ್ಥೆಗಳು ಮಹಾವೀರ ಸ್ವಾಮಿಯ ಭಾವಚಿತ್ರವನ್ನು ಶಿವಮೊಗ್ಗ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಿದರು.