ರಾಮನವಮಿ: ಸಾಂಸ್ಕೃತಿಕ ಕಾರ್ಯಕ್ರಮ
ಶಿವಮೊಗ್ಗ: ಭಾರತೀಯ ಸಂಸ್ಕೃತಿಯು ದೇವಾಲಯಗಳ ಮೂಲಕ ಜನಗಳಿಗೆ ತಲುಪುವಂತಿರಬೇಕು. ಸಂಗೀತ, ಭಜನೆ, ಹರಿಕಥೆ, ಗಮಕಗಳಂತಹ ಕಲೆಗಳ ಮೂಲಕ ಇದು ಜನಗಳನ್ನು ಮುಟ್ಟಬೇಕು ಎಂದು ಶಿಕ್ಷಣ ತಜ್ಞೆ ರುಕ್ಮಿಣಿ ಮಾಧವರಾವ್ ಹೇಳಿದರು.
ಲಲಿತ ಕಲಾ ಕೇಂದ್ರವು ವಿನೋಬ ನಗರದ ಶ್ರೀ ಆಂಜನೇಯಸ್ವಾಮಿ ದೇವಾಲಯ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ದೇವಾಲಯದ ಆವರಣದಲ್ಲಿ ರಾಮನವಮಿಯ ಪ್ರಯುಕ್ತ ಹಮ್ಮಿಕೊಂಡಿದ್ದ ನಾಲ್ಕು ದಿನಗಳ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅಧ್ಯಕ್ಷತೆಯನ್ನು ದೇವಾಲಯ ಸಮಿತಿಯ ಮೋಹನ್ ವಹಿಸಿದ್ದರು.
ನಾಲ್ಕು ದಿನಗಳ ಕಾರ್ಯಕ್ರಮದಲ್ಲಿ ತುಮಕೂರಿನ ಹರಿದಾಸ ಶ್ರೀ ಪ್ರಕಾಶದಾಸರಿಂದ ಕಥಾಕೀರ್ತನ, ಅನ್ನಪೂರ್ಣ ಅವರಿಂದ ಶ್ರೀರಾಮನ ವ್ಯಕ್ತಿತ್ವದ ಮೇಲೆ ಉಪನ್ಯಾಸ, ವಿದುಷಿ ಶ್ರೀವಳ್ಳಿ ಮತ್ತು ಶಿಷ್ಯವೃಂದ ಅಮಿತ್, ಉತ್ಸವ್, ಮೈಥಿಲಿ, ಕೊನೆಯ ದಿನ ಶಾರದ ಗೋಪಾಲ ಇವರಿಂದ ಗಮಕವಾಚನ ಮತ್ತು ಸರಸ್ವತಿ ತಾರಾಪ್ರಸಾದ್‌ರಿಂದ ಕುಮಾರವ್ಯಾಸ ಭಾರತದ ಯಕ್ಷಪ್ರಶ್ನೆ ಭಾಗದ ವ್ಯಾಖ್ಯಾನ ನಡೆಯಿತು.