ಆರೋಪಿಗಳ ವಿರುದ್ಧ ಕ್ರಮಕ್ಕೆ ಆಗ್ರಹ
ತೀರ್ಥಹಳ್ಳಿ: ಮಲ್ನಾಡ್ ಕ್ಲಬ್ಬಿನ ಸದಸ್ಯರಾದ ತಮ್ಮ ಮೇಲೆ ಕ್ಲಬ್ಬಿನ ಆವರಣದಲ್ಲೇ ಇತ್ತೀಚೆಗೆ ಹಲ್ಲೆ ನೆಡೆದಿದ್ದು, ಇದು ರಾಜಕೀಯ ದ್ವೇಶದಿಂದ ನೆಡೆದ ಹಲ್ಲೆ ಎಂದು ಜಯದೇವ ಶೆಣೈ ತಿಳಿಸಿದ್ದಾರೆ.
ತಮ್ಮ ಕಣ್ಣಿನ ಮೇಲ್ಭಾಗಕ್ಕೆ ತೀವ್ರ ಪೆಟ್ಟುಬಿದ್ದಿದ್ದರೂ ಸರ್ಕಾರಿ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ನೀಡಲು ನಿರಾಕರಿಸಲಾಯಿತು. ಅಲ್ಲದೆ ಪೊಲೀಸರಿಗೆ ದೂರು ನೀಡಿದರೂ ಪ್ರಭಾವಿಗಳ ಒತ್ತಡಕ್ಕೆ ಮಣಿದು ದೂರು ಸ್ವೀಕರಿಸದೆ ಸತಾಯಿಸಿದ್ದಾರೆ ಎಂದು ಸುದ್ದಿ ಗೋಷ್ಠಿಯಲ್ಲಿ ಅವರು ಹೇಳಿದರು.
ತಮ್ಮ ಮೇಲೆ ಹಲ್ಲೆ ನೆಡೆಸಿರುವ ಮಲ್ನಾಡ್ ಕ್ಲಬ್ಬಿನ ಉಪಾಧ್ಯಕ್ಷ ಸಂದೇಶ ಜವಳಿ, ಕಾರ್ಯದರ್ಶಿ ಎ.ಸಿ.ಸಿ.ಕೃಷ್ಣಮೂರ್ತಿ ಮಕ್ಕಿಮನೆ ಪ್ರಶಾಂತ್ ಹಾಗೂ ಬಾಬಿ ರವೀಶ್ ಇವರುಗಳ ಮೇಲೆ ಸೂಕ್ತ ಪೊಲೀಸರು ಕಾನೂನು ಕ್ರಮ ತೆಗೆದುಕೊಳ್ಳುವಂತೆ ಅವರು ಆಗ್ರಹಿಸಿದ್ದಾರೆ.
ಮತದಾನ ಅರಿವು ಅಭಿಮಾನ
ತೀರ್ಥಹಳ್ಳಿ: ಮತದಾನದ ಬಗ್ಗೆ ಅರಿವು ಮೂಡಿಸಲು ತೀರ್ಥಹಳ್ಳಿ ಸಮೀಪದ ಹೊಸಹಳ್ಳಿ ಮತ್ತು ತೀರ್ಥಹಳ್ಳಿ ಪಟ್ಟಣದ ಮತಗಟ್ಟೆಗಳ ವ್ಯಾಪ್ತಿಯಲ್ಲಿ ತಾಲ್ಲೂಕು ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗಳ ನೇತೃತ್ವದಲ್ಲಿ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ತೀರ್ಥಹಳ್ಳಿ ಪಟ್ಟಣದಲ್ಲಿ ನೆಡೆದ ಅಭಿಯಾನದಲ್ಲಿ ಆಟೋ ರಿಕ್ಷಾ ಸಂಘವು ಸಕ್ರಿಯವಾಗಿ ಭಾಗವಹಿಸಿತು. ಚುನಾವಣಾಧಿಕಾರಿಗಳಾದ ರಾಜಗೋಪಾಲ್, ತಹಶೀಲ್ದಾರ್ಗ್ಣೇಶಮೂರ್ತಿ, ಮಾದರಿ ನೀತಿ ಸಂಹಿತೆ ತಾಲ್ಲೂಕು ಮುಖ್ಯಸ್ಥರಾದ ರವಿಕುಮಾರ್, ಪುಟ್ಟಸ್ವಾಮಿ ಮತ್ತು ಈ ಅಭಿಯಾನದಲ್ಲಿ ಭಾಗವಹಿಸಿ ಮತದಾನ ಮಾಡುವಂತೆ ನಾಗರಿಕರಲ್ಲಿ ಜಾಗೃತಿ ಮೂಡಿಸಿದರು.