ನಾಳೆ ಧ್ವನಿಸುರಳಿ ಬಿಡುಗಡೆ
ಸಾಗರ: ಖ್ಯಾತ ಸುಗಮಸಂಗೀತ ಕಲಾವಿದ ಸುಭಾಷ್ ಹರೇಗೊಪ್ಪ ಸಂಗೀತ ಪ್ರತಿಷ್ಠಾನದ ಉದ್ಘಾಟನೆ ಹಾಗೂ ಧ್ವನಿಸುರಳಿ ಬಿಡುಗಡೆ ಕಾರ್ಯಕ್ರಮವು ಏ. 27ರಂದು ಸಂಜೆ 5ಕ್ಕೆ ಪಟ್ಟಣದ ಶಾರದಾಂಬಾ ಸಭಾಭವನದಲ್ಲಿ ನಡೆಯಲಿದೆ.
ರಂಗಕಮರ್ ಕೆ.ವಿ. ಅಕ್ಷರ ಪ್ರತಿಷ್ಠಾನವನ್ನು ಉದ್ಘಾಟಿಸಲಿದ್ದು, ಸುಭಾಷ್ ಹರೇಗೊಪ್ಪ ರಾಗ ಸಂಯೋಜಿಸಿ ಹಾಡಿರುವ 80 ಹಾಡುಗಳ ಧ್ವನಿಸುರುಳಿಯನ್ನು ಕಿರುತೆರೆ ನಿರ್ದೇಶಕ ರಮೇಶ್ ಬೇಗಾರು ಬಿಡುಗಡೆ ಮಾಡಲಿದ್ದಾರೆ. ರಂಗಕಮರ್ ಚಿದಂಬರರಾವ್ ಜಂಬೆ ಉಪಸ್ಥಿತರಿರುವರು.
ನಂತರ ಬೆಂಗಳೂರಿನ ರವಿ ಮುರೂರು ಮತ್ತು ತಂಡದವರಿಂದ ಸಂಗೀತ ಹಾಗೂ ಶಿವಮೊಗ್ಗದ ಪಂಡಿತ್ ನಾಗಭೂಷಣ ಹೆಗಡೆ ಅವರಿಂದ ವಚನ ಗಾಯನ ಕಾರ್ಯಕ್ರಮ ಏರ್ಪಡಿಸಲಾಗಿದೆ.