'ಪ್ರಜ್ಞಾವಂತ ಮತದಾರರೇ ಆಶಾಕಿರಣ'
ಕ.ಪ್ರ.ವಾರ್ತೆ ಭದ್ರಾವತಿ ಏ.24
ಹಣ ಮತ್ತು ಜಾತಿ ರಾಜಕಾರಣದ ನಡುವೆಯೂ ಪ್ರಜ್ಞಾವಂತ ಮತದಾರರಿವುದನ್ನು ತಾವು ಸಮಾಜದಲ್ಲಿ ಕಂಡಿದ್ದು ಅಂತಹವರೇ ತಮಗೆ ಆಶಾಕಿರಣ ಎಂದು ಭದ್ರಾವತಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿರುವ ಲೋಕಸತ್ತಾ ಅಭ್ಯರ್ಥಿ ಎಸ್. ವೆಂಕಟೇಶಮೂರ್ತಿ ತಿಳಿಸಿದರು.
ಅವರು ಗುರುವಾರ ಸಂಜೆ ಪತ್ರಿಕಾ ಭವನದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅನಿರ್ಬಂಧಿತವಾಗಿ ಹರಡುತ್ತಿರುವ ಭ್ರಷ್ಟಾಚಾರ ನಿರ್ಮೂಲನೆಗೊಳಿಸುವುದು ಮತ್ತು ಅಳಿದುಹೋಗುತ್ತಿರುವ ಭದ್ರಾವತಿ ಕ್ಷೇತ್ರದ ಪುನರುತ್ಥಾನಕ್ಕೆ ಶ್ರಮಿಸುವುದು ತಮ್ಮ ಗುರಿಯಾಗಿದೆ ಎಂದು ತಿಳಿಸಿದರು.
ಆಧಾರ ಸ್ತಂಭ: ಭದ್ರಾವತಿಯಲ್ಲಿ ವಿಶ್ವೇಶ್ವರಾಯ ಕಬ್ಬಿಣ್ತ ಉಕ್ಕು ಕಾರ್ಖಾನೆ ಹಾಗೂ ಎಂ.ಪಿ.ಎಂ ಕಾರ್ಖಾನೆಗಳು ಜನತೆಯ ಆಧಾರ ಸ್ತಂಭಗಳಾಗಿದ್ದು, ಇವೆರಡೂ ಕಾರ್ಖಾನೆಯ ಪುನರುತ್ಥಾನಕ್ಕೆ ಶ್ರಮಿಸುವುದರೊಂದಿಗೆ ಮತ್ತೆರಡು ಕೈಗಾರಿಕೆಗಳನ್ನು ಸ್ಥಾಪಿಸಿ ಕನಿಷ್ಠ ಹತ್ತು ಸಾವಿರ ನೂತನ ಉದ್ಯೋಗ ಸೃಷ್ಟಿಸುವುದು ತಮ್ಮ ಉದ್ದೇಶವಾಗಿದೆ ಎಂದರು.
ಎಲ್ಲಾ ವಿಧಾನಸಭಾ ಕ್ಷೇತ್ರಗಳು ಮತ್ತು ಸ್ಥಳೀಯ ಸಂಸ್ಥೆ ವಾರ್ಡುಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಸಜ್ಜಾಗುತ್ತಿದೆ. ಭದ್ರಾವತಿಯಲ್ಲಿ ಲೋಕಸತ್ತಾ ಕಚೇರಿಯನ್ನು ಶೀಘ್ರದಲ್ಲೇ ತೆರೆಯಲಿದ್ದು, 18ರಿಂದ 35 ವರ್ಷ ವಯೋವುತಿಯೊಳಗಿನ ಯುವಕರನ್ನು ಸದಸ್ಯರನ್ನಾಗಿ ಮಾಡಿಕೊಳ್ಳಲಾಗುವುದು ಎಂದರು.
ಸುಬ್ರಮಣಿ, ಶಂಕರಮೂರ್ತಿ ಮತ್ತು ಬಾಬು ಮೊದಲಾದವರು ಇದ್ದರು.