ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಬಿಜೆಪಿ ಸರ್ಕಾರದಿಂದ ಹೆಚ್ಚಿನ ಸಾಧನೆ

Rashmi Kasaragodu
Updated On : 26 Apr 2013, 10:42 am

ಶಿವಮೊಗ್ಗ: ಈ ಬಾರಿಯ ಚುನಾವಣಾ ವಿಷಯ ಅಭಿವೃದ್ಧಿಯೇ ಹೊರತು ಅಪಪ್ರಚಾರವಲ್ಲ ಎಂದು ವಿಧಾನಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹೇಳಿದ್ದಾರೆ.
ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಭಾರತ ಸರ್ಕಾರದ ಸೆಂಟ್ರಲ್ ಸ್ಟ್ಯಾಟಿಸ್ಟಿಕಲ್ ಆರ್ಗನೈಜೇಷನ್ ಅಂಕಿಅಂಶಗಳನ್ನು ಆಧರಿಸಿ, ಕಾಂಗ್ರೆಸ್ ಆಡಳಿತವಧಿಯಲ್ಲಿ ರಾಜ್ಯವು ಸಾಧಿಸಿದ ಪ್ರಗತಿಗಿಂತ ಬಿಜೆಪಿ ಸರ್ಕಾರ ಹೆಚ್ಚು ಸಾಧನೆ ಮಾಡಿದೆ ಎಂದರು.
ಕಾಂಗ್ರೆಸ್ ಅವಧಿಯಲ್ಲಿ 8,183 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಬಿಜೆಪಿ ಅವಧಿಯಲ್ಲಿ ಈ ಸಂಖ್ಯೆ 842ಕ್ಕೆ ಇಳಿದಿದೆ. ಕೃಷಿ ಬೆಳವಣಿಗೆ ಕಾಂಗ್ರೆಸ್ ಅವಧಿಯಲ್ಲಿ ಋಣಾತ್ಮಕವಾಗಿದ್ದರೆ ಬಿಜೆಪಿ ಅಧಿಯಲ್ಲಿ ಶೇಕಡಾ 16.8ಕ್ಕೆ ಏರಿಕೆಯಾಗಿದೆ. ನೀರಾವರಿ, ವಿದ್ಯುತ್, ಅನಿಲ ಕ್ಷೇತ್ರ, ಮೀನುಗಾರಿಕೆ, ಗೃಹನಿರ್ಮಾಣ ಇತ್ಯಾದಿ ಕ್ಷೇತ್ರದಲ್ಲಿಯೂ ಸಹ ಪ್ರಗತಿ ಸಾಧಿಸಿದೆ ಎಂದು ತಿಳಿಸಿದರು. ಚುನಾವಣೆಯ ನಂತರ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದರು. ಪತ್ರಿಕಾಗೋಷ್ಠಿಯಲ್ಲಿ ಸೂಡಾ ಅಧ್ಯಕ್ಷ ದತ್ತಾತ್ರಿ, ಮಾಧ್ಯಮ ಪ್ರಮುಖ ಬಾ.ರಾ. ಮಧುಸೂದನ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement