ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಅಭ್ಯರ್ಥಿ ವಯಸ್ಸು ಪ್ರಸ್ತಾಪಿಸಿ ಜೆಡಿಎಸ್ ಪ್ರಚಾರ: ಕೆಜೆಪಿ ಖಂಡನೆ

Rashmi Kasaragodu
Updated On : 27 Apr 2013, 10:33 am

ಕ.ಪ್ರ.ವಾರ್ತೆ ಟಿ ಶಿವಮೊಗ್ಗ ಟಿ  ಏ.26
ಶಿವಮೊಗ್ಗ ಗ್ರಾಮಾಂತರ ಕೆಜೆಪಿ ಅಭ್ಯರ್ಥಿ ಬಸವಣ್ಯಪ್ಪನವರ ವಯೋಸಹಜ ಸಮಸ್ಯೆಗಳನ್ನು ಎತ್ತಿಕೊಂಡು ಅಪಪ್ರಚಾರ ಮಾಡುತ್ತಿರುವ ಪ್ರತಿಪಕ್ಷಗಳ ವಿರುದ್ಧ ಕೆಜೆಪಿ ಮುಖಂಡರು ವಾಗ್ದಾಳಿ ನಡೆಸಿದ್ದಾರೆ. ನ್ಯಾಯಯತ ಮಾರ್ಗದಲ್ಲಿ ಚುನಾವಣೆಯಲ್ಲಿ ಜಯಿಸುವುದು ಅಸಾಧ್ಯ ಎಂದು ಮನಗಂಡಿರುವ ಜೆಡಿಎಸ್ ನಾಯಕರು ಮತ್ತು ಅಭ್ಯರ್ಥಿಯವರು ಕೀಳು ಮಟ್ಟದ ಅಪಪ್ರಚಾರದಲ್ಲಿ ತೊಡಗಿರುವುದು ಅಸಹ್ಯಕರ ಮತ್ತು ಸಹಿಸಿಕೊಳ್ಳಲು ಅಸಾಧ್ಯ. ಶಿವಮೊಗ್ಗ ಜಿಲ್ಲೆಯಲ್ಲಿಯೇ ಅತ್ಯಂತ ಅಪಾರ ರಾಜಕೀಯ ಅನುಭವ, ಸರಳತೆ, ಸಜ್ಜನಿಕೆಯ ಸಾಕಾರ ರೂಪದಂತಿರುವ ಮಾಜಿ ಸಚಿವ ಜಿ. ಬಸವಣ್ಯಪ್ಪನವರ ಅನುಭವದ ಅರ್ಧದಷ್ಟೂ ವಯಸ್ಸಾಗಿರದವರು ಅವರ ವಯಸ್ಸನ್ನೇ ಮಾನದಂಡವಾಗಿ ಮಾಡಿಕೊಂಡು ವಾಮಮಾರ್ಗದಲ್ಲಿ ಚುನಾವಣೆಯಲ್ಲಿ ಜಯಗಳಿಸುತ್ತೇವೆ ಎಂಬ ಕನಸನ್ನು ಬಿಟ್ಟು ಬಿಡಲಿ ಎಂದು ಕೆಜೆಪಿ ಮುಖಂಡರು ಆಗ್ರಹಿಸಿದ್ದಾರೆ.
ನ್ಯಾಯವಾಗಿ ನಡೆಯಿರಿ: ಕೆಜೆಪಿ ನೇತಾರ ಬಿ.ಎಸ್. ಯಡಿಯೂರಪ್ಪನವರು ಉಪಮುಖ್ಯಮಂತ್ರಿ ಮತ್ತು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸಾಧಿಸಿದ ಪ್ರಗತಿ, ಅಭಿವೃದ್ಧಿ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿದ್ದು, ನ್ಯಾಯವಾದ ಮಾರ್ಗದಲ್ಲಿ ಚುನಾವಣೆ ಗೆಲ್ಲಲು ಪ್ರಯತ್ನಿಸುವಂತೆ ಜೆಡಿಎಸ್ ನಾಯಕರಿಗೆ ಬುದ್ಧಿವಾದ ಹೇಳಿದ್ದಾರೆ.
ಜಿ. ಬಸವಣ್ಯಪ್ಪನವರು ಕ್ಷೇತ್ರದ ಕೆಜೆಪಿ ಅಭ್ಯರ್ಥಿ ಎಂದು ಘೋಷಣೆಯಾದ ದಿನದಿಂದಲೇ ಕ್ಷೇತ್ರದಾದ್ಯಂತ ಬಿರುಸಿದ ಪ್ರಚಾರ ನಡೆಸಿದ್ದಾರೆ. ಪ್ರತಿ ನಿತ್ಯ ಒಂದೊಂದು ಜಿಲ್ಲಾ ಪಂಚಾಯಿತಿ ಕ್ಷೇತ್ರ ವ್ಯಾಪ್ತಿಯಲ್ಲಿ ವ್ಯವಸ್ಥಿತವಾಗಿ ಮನೆ ಮನೆಗಳಿಗೆ ತೆರಳಿ ಮತಯಾಚಿಸುತ್ತಿದ್ದು, 25 ಸಾವಿರಕ್ಕೂ ಹೆಚ್ಚಿನ ಮತಗಳ ಅಂತರದಿಂದ ಜಯಿಸುತ್ತೇವೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ನಮಗೆ ಎದುರಾಳಿ ಕಾಂಗ್ರೆಸ್ ಹೊರತು ಜೆಡಿಎಸ್ ಅಥವಾ ಬಿಜೆಪಿ ಅಲ್ಲ ಎಂದು ಕ್ಷೇತ್ರ ಕೆಜೆಪಿ ಅಧ್ಯಕ್ಷ ಜಿ. ಸದಾಶಿಪ್ಪ ಗೌಡ, ಪ್ರಧಾನ ಕಾರ್ಯದರ್ಶಿ ಬಿ.ಎಚ್. ರಾಮಚಂದ್ರ, ಎಸ್. ಹಾಲಸ್ವಾಮಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement