ದರ್ಗಾ ಉರೂಸ್‌ಗೆ ಚಾಲನೆ
ಹೊಸನಗರ: ತಾಲೂಕಿನ ಬಿದನೂರು ನಗರದ ಇತಿಹಾಸ ಪ್ರಸಿದ್ಧ ದರ್ಗಾ ಉರೂಸ್‌ಗೆ ಶುಕ್ರವಾರ ಸಾಮೂಹಿಕ ಪ್ರಾರ್ಥನೆಯೊಂದಿಗೆ ಚಾಲನೆ ನೀಡಲಾಯಿತು. ಏ.29ರ ವರೆಗೆ ಉರೂಸ್ ನಡೆಯಲಿದ್ದು, ಸಂದಲ್ ಮೆರವಣಿಗೆ, ಮತಪ್ರಸಂಗ, ಉಪನ್ಯಾಸ ಸೇರಿದಂತೆ ಹಲವು ಕಾರ್ಯಕ್ರಮಗಳು ನಡೆಯಲಿವೆ.ಚುನಾವಣಾ ನೀತಿಸಂಹಿತೆ ಹಿನ್ನೆಲೆಯಲ್ಲಿ ಉರೂಸ್ ಕಾರ್ಯಕ್ರಮ ಮುಂದಕ್ಕೆ ಹೋಗಬಹುದು ಎನ್ನಲಾಗಿತ್ತು. ಆದರೆ ಚುನಾವಣೆ ಆಯೋಗ ಅನುಮತಿ ನೀಡಿದ ಹಿನ್ನೆಲೆಯಲ್ಲಿ ನಿಗದಿತ ದಿನದಂತೆ ನಡೆಯುತ್ತಿದೆ.