'ರಾಜಕೀಯ ಪಕ್ಷಗಳ ಪರ ಅಲೆ ಎನ್ನುವುದರಲ್ಲಿ ಹುರುಳಿಲ್ಲ'
ಕ.ಪ್ರ.ವಾರ್ತೆ ಟಿ ಭದ್ರಾವತಿ ಟಿ ಏ.26
ಚುನಾವಣೆಯಲ್ಲಿ ತಮ್ಮ ಪಕ್ಷಗಳ ಪರ ಅಲೆ ಇದೆ ಎಂದು ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಹೇಳಿಕೊಳ್ಳುತ್ತಿರುವುದರಲ್ಲಿ ಯಾವುದೇ ಹುರುಳಿಲ್ಲವೆಂದು ಬಿಎಸ್ಪಿ ಅಭ್ಯರ್ಥಿ ಸುರೇಶ್ ತಿಳಿಸಿದರು. ವಾಸ್ತವವಾಗಿ ಜನರಲ್ಲಿ ಯಾವ ಪಕ್ಷದ ಪರ ಅಲೆಯೂ ಇಲ್ಲವೆಂದು ಗುರುವಾರ ಸಂಜೆ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕ್ಷೇತ್ರದಲ್ಲಿ ರೌಡಿಗಳ, ಗೂಂಡಾಗಿರಿ ಮಾಡುವವರ, ಓಸಿ ಬಿಡ್ಡರ್ಗಳ, ಇಸ್ಪೀಟ್ ಜೂಜುಕೋರರು ಸೇರಿದಂತೆ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿರುವವರ ಅಲೆ ಇರುವುದು ಮಾತ್ರ ಸತ್ಯಾಂಶ ಎಂದು ಅವರು, ಪ್ರತಿಕ್ರಿಯಿಸಿದರಲ್ಲದೆ ಕಾಂಗ್ರೆಸ್ ಅಭ್ಯರ್ಥಿ ಇಬ್ರಾಹಿಂ ನೀಡಿರುವ ಹೇಳಿಕೆಗೆ ಟೀಕಿಸಿದರು.
ಕಾಂಗ್ರೆಸ್ ತಕ್ಕಪಾಠ: ನಗರವನ್ನು ಯಾರು ಯಾರಿಗೂ ಗುತ್ತಿಗೆ ನೀಡಲು ಸಾಧ್ಯವಿಲ್ಲ. ಸಂಗಮೇಶ್ವರ್ ಕಾಂಗ್ರೆಸ್ ತಮಗೆ ಟಿಕೆಟ್ ನೀಡದೆ ವಂಚಿಸಿದೆ ಎನ್ನುತ್ತಾರೆ. ನಗರಸಭೆ ಚುನಾವಣೆಯಲ್ಲಿ ನಿಷ್ಠಾವಂತ ಕಾರ್ಯಕರ್ತರಿಗೆ ಸ್ಪರ್ಧಿಸಲು ಅವಕಾಶ ನೀಡದೆ ಇವರು ವಂಚಿಸಿದ್ದು ಸರಿಯೇ ಎಂದು ಪ್ರಶ್ನಿಸಿದ ಸುರೇಶ್ ಇದಕ್ಕೆ ತಕ್ಕ ಪ್ರತಿಫಲವಾಗಿ ಕಾಂಗ್ರೆಸ್ ಇವರಿಗೆ ಟಿಕೆಟ್ ನೀಡಲಿಲ್ಲವೆಂದರು.
ಸುದ್ದಿಗೋಷ್ಠಿಯಲ್ಲಿ ಶಿವಕುಮಾರ್ ಬೆಳ್ಳಿಗೆರೆ, ರಾಜೇಂದ್ರ, ರಾಜು, ವೀರೇಶ್ ಕ್ಯಾತಿನಕೊಪ್ಪ, ಶಂಕರ್, ಜಗದೀಶ್ ಮತ್ತು ವೆಂಕಟೇಶ್ ಹಾಜರಿದ್ದರು.