ಸಮಾರೋಪ ಇಂದು
ಸಾಗರ: ಇಲ್ಲಿನ ಸ್ಪಂದನ ಸಂಸ್ಥೆ ಒಂದು ತಿಂಗಳ ಕಾಲ ಹಮ್ಮಿಕೊಂಡಿದ್ದ ಚೈತ್ರಮೇಳ ಮಕ್ಕಳ ರಂಗ ತರಬೇತಿ ಶಿಬಿರದ ಸಮಾರೋಪ ಸಮಾರಂಭ ಏ. 27ರಂದು ಸಂಜೆ 5ಕ್ಕೆ ಕಾಗೋಡು ತಿಮ್ಮಪ್ಪ ರಂಗಮಂದಿರದಲ್ಲಿ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾಹಿತಿ ಡಾ. ನಾ. ಡಿಸೋಜ ವಹಿಸಲಿದ್ದು, ರಂಗ ಕಲಾವಿದ ಸೀತಾರಾಮ ಹಾರೆಕೊಪ್ಪ, ಲೇಖಕ ಶ್ರೀನಿವಾಸ್ ಕರಿಯಪ್ಪ ಬೆಂಗಳೂರು, ಎಂ.ವಿ. ಪ್ರತಿಭಾ, ವಿಜಯಶ್ರೀ ಹಾಗೂ ನಾಗೇಂದ್ರ ಎಸ್. ಕುಮಟ ಭಾಗವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ನಂತರ ಶಿಬಿರದಲ್ಲಿ ಪಾಲ್ಗೊಂಡ ಮಕ್ಕಳಿಂದ ಕಾಗೆ ಕಣ್ಣು ಇರುವೆ ಮೇಲೆ (ರಚನೆ- ಕೋಟೆಗಾನಹಳ್ಳಿ ರಾಮಯ್ಯ, ನಿರ್ದೇಶನ - ಎಂ.ವಿ. ಪ್ರತಿಭಾ) ನಾಟಕ ಪ್ರದರ್ಶನಗೊಳ್ಳಲಿದೆ. ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಸ್ಪಂದನದ ಪ್ರಕಟಣೆಯಲ್ಲಿ ಕೋರಲಾಗಿದೆ.
ಇಂದಿನಿಂದ ವಾರ್ಷಿಕೋತ್ಸವ
ಶಿವಮೊಗ್ಗ: ಜವಾಹರಲಾಲ್ ನೆಹರು ರಾಷ್ಟ್ರೀಯ ತಾಂತ್ರಿಕ ಮಹಾವಿದ್ಯಾಲಯವು ಏ.27 ಹಾಗೂ 28ರಂದು ಸಂಜೆ 5.30ಕ್ಕೆ ಕಾಲೇಜಿನ ವಾರ್ಷಿಕ ದಿನಾಚರಣೆ ಹಮ್ಮಿಕೊಂಡಿದೆ. 27ರಂದು ಸಂಜೆ ಕ್ರೀಡಾ ದಿನಾಚರಣೆ ನಡೆಯಲಿದ್ದು, ಬಹುಮಾನ ವಿತರಿಸಲಾಗುತ್ತದೆ. 28ರಂದು ಸಾಂಸ್ಕೃತಿಕ ದಿನಾಚರಣೆ ನಡೆಯಲಿದ್ದು, ಮುಖ್ಯ ಅತಿಥಿಯಾಗಿ ಡಾ. ಪ್ರಕಾಶ್, ಅಧ್ಯಕ್ಷರಾಗಿ ತಿಮ್ಮಯ್ಯ ಪಾಲ್ಗೊಳ್ಳುವರು. ರ್ಯಾಂಕ್ ವಿಜೇತ ಹಾಗೂ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಗುವುದು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.