ಇಂದು ಶಿವಮೊಗ್ಗದಲ್ಲಿ ಶಿಬಿರ ಸಮಾರೋಪ
ಶಿವಮೊಗ್ಗ: ಗೋವಿಂದ ವಸಂತ ಗ್ರಾಮೀಣಾಭಿವೃದ್ಧಿ ಫೌಂಡೇಶನ್ ಹಮ್ಮಿಕೊಂಡ ಬೇಸಿಗೆ ಶಿಬಿರದ ಸಮಾರೋಪ ಏಪ್ರಿಲ್ 28ರಂದು ಹಮ್ಮಿಕೊಂಡಿದೆ. ಹೊಸೂಡಿಯ ಜಿ.ಜಿ. ಕ್ಯಾಂಪ್ನಲ್ಲಿ ಅಂದು ಬೆಳಿಗ್ಗೆ 10.30ರಿಂದ ಕಾರ್ಯಕ್ರಮ ನಡೆಯಲಿದ್ದು, ನಿವೃತ್ತ ಪ್ರಾಧ್ಯಾಪಕ ಪ್ರೊ. ಜೇಕಬ್ ಕೆನಡಿ, ಬಸವಕೇಂದ್ರದ ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು. ನಿವೃತ್ತ ಪ್ರಾಂಶುಪಾಲ ಎ.ಬಿ.ಸುರೇಶ್, ನಿವೃತ್ತ ಬಿಇಓ ಹನುಮಾನ್, ರಾಜ್ಯ ವಿಜ್ಞಾನ ಪರಿಷತ್ನ ಶೇಖರ್ ಗೌಳೇರ್ ಉಪಸ್ಥಿತರುವರು ಎಂದು ಸಂಸ್ಥೆ ತಿಳಿಸಿದೆ.