ಖರ್ಚು, ವೆಚ್ಚ ವಿವರ ನೀಡಲು ಸೂಚನೆ
ಶಿವಮೊಗ್ಗ: ಚುನಾವಣೆಗೆ ಸ್ಪರ್ಧಿಸಿದ 17 ಅಭ್ಯರ್ಥಿಗಳಿಗೆ ದಿನಾಂಕ ಹಾಗೂ ಸಮಯದೊಂದಿಗೆ ಮೂರು ಬಾರಿ ಪರಿವೀಕ್ಷಣಾ ಸಮಯವನ್ನು ಭದ್ರಾವತಿ ಚುನಾವಣಾಧಿಕಾರಿಗಳು ನಿಗದಿಪಡಿಸಿದ್ದರೂ ಅಭ್ಯರ್ಥಿಗಳು ಲೆಕ್ಕಪತ್ರ ನೀಡಲು ವಿಫಲರಾಗಿದ್ದಾರೆ.
ಏ. 23 ಮತ್ತು 24ರಂದು 14 ಅಭ್ಯರ್ಥಿಗಳ ತಪಾಸಣೆ ನಡೆಸಲಾಗಿದ್ದು, ಈ ಪೈಕಿ ಒಬ್ಬ ಅಭ್ಯರ್ಥಿ ಮಾತ್ರ ತಪಾಸಣೆಗೆ ಹಾಜರಾಗಿ, ಶೂನ್ಯ ವರದಿ ಸಲ್ಲಿಸಿರುತ್ತಾರೆ. ಇತರೆ ಅಭ್ಯರ್ಥಿಗಳು ಹಾಜರಾಗಿದ್ದರೂ ಕೂಡ ಯಾವುದೇ ತರಹದ ಖರ್ಚು, ವೆಚ್ಚ ಮಾಹಿತಿಯನ್ನು ತಪಾಸಣೆಗೆ ಸಲ್ಲಿಸಿರುವುದಿಲ್ಲ. ಚುನಾವಣಾ ಅಭ್ಯರ್ಥಿಗಳಿಗೆ ಕೂಡಲೇ ನಿಗದಿಪಡಿಸಿರುವ ನಮೂನೆ ಹಾಗೂ ಸಮಯದಲ್ಲಿ ಖರ್ಚು-ವೆಚ್ಚ ವಿವರ ಸಲ್ಲಿಸಲು ಚುನಾವಣಾಧಿಕಾರಿಗಳಿಂದ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದ್ದು, ತಪ್ಪಿದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಕ್ಷೇತ್ರದ ಖರ್ಚು ವೆಚ್ಚ ವೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.