ಸುದ್ದಿ ಸಂಕ್ಷೇಪ
ದಾಸಪದ ಚಿಂತನ
ಶಿವಮೊಗ್ಗ: ಶ್ರೀ ಗುರುಗುಹ ಸಂಗೀತ ಮಹಾವಿದ್ಯಾಲಯವು ಏಪ್ರಿಲ್ 29ರಂದು ಸಂಜೆ 6.30ಕ್ಕೆ ವಿನಾಯಕ ನಗರದ ನವ್ಯಶ್ರೀ ಸಭಾಂಗಣದಲ್ಲಿ ದಾಸಪದ ಚಿಂತನ ಕಾರ್ಯಕ್ರಮ ಹಮ್ಮಿಕೊಂಡಿದೆ. ನಟೇಶ್ ವ್ಯಾಖ್ಯಾನ ಮಾಡಲಿದ್ದು, ನಗರದ ವಿವಿಧ ಬಡಾವಣೆಯ ಶಿಬಿರಾರ್ಥಿ ಮಾತೆಯರಿಂದ ಗಾಯನ ಕಾರ್ಯಕ್ರಮವಿರುತ್ತದೆ. ಎಂ.ಯು.ರಾಘವೇಂದ್ರ ಪ್ರಭು ತಬಲದಲ್ಲಿ ಸಹಕಾರ ನೀಡುವರು ಎಂದು ಮಹಾವಿದ್ಯಾಲಯ ತಿಳಿಸಿದೆ.
ನಾಳೆ ತರಬೇತಿ
ಶಿವಮೊಗ್ಗ: ಎಫ್ಪಿಎ ಇಂಡಿಯಾ ಶಿವಮೊಗ್ಗ ಶಾಖೆಯು ಏಪ್ರಿಲ್ 29ರಂದು ಹದಿಯರೆಯದ ಶಿಕ್ಷಣ ನೀಡುವ ತರಬೇತು ದಾರರಿಗೆ ತರಬೇತಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಶಿವಮೊಗ್ಗ ಮಲ್ಲೇಶ್ವರ ನಗರದ ಎಫ್ಪಿಎ ಇಂಡಿಯಾ ಸಭಾಂಗಣದಲ್ಲಿ ಅಂದು ಬೆಳಿಗ್ಗೆ 11 ಗಂಟೆಗೆ ತರಬೇತಿ ಆರಂಭವಾಗಲಿದ್ದು, ಪ್ರೊ. ಹನುಮಂತರಾವ್, ಡಾ. ಭಾರತಿ ದೇವಿ, ರಮೇಶ್ ಬಾಬು, ಅಶೋಕ್ ಕುಮಾರ್, ಮಾಲತಿ, ಜಯಲಕ್ಷ್ಮಿ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಳ್ಳುವರು. ಜಯಶ್ರೀ ಅಧ್ಯಕ್ಷತೆ ವಹಿಸಲಿದ್ದಾರೆ.
ಜೆಡಿಎಸ್ಗೆ ಬೆಂಬಲ
ಶಿವಮೊಗ್ಗ: ನವ ಕರ್ನಾಟಕ ನಿರ್ಮಾಣ ವೇದಿಕೆಯು ಶಿವಮೊಗ್ಗ, ಚಿಕ್ಕಮಗಳೂರು ಸೇರಿದಂತೆ ರಾಜ್ಯದ 18 ಜಿಲ್ಲೆಗಳಲ್ಲಿ ಜೆಡಿಎಸ್ಗೆ ಬೆಂಬಲ ಸೂಚಿಸಲಿದೆ ಎಂದು ವೇದಿಕೆ ಅಧ್ಯಕ್ಷ ಗೋ ರಮೇಶ್ ಗೌಡ ತಿಳಿಸಿದ್ದಾರೆ. ಕರ್ನಾಟಕದಲ್ಲಿ ಕಾವೇರಿ ನದಿ ನೀರಿನ ವಿಚಾರ ಹಾಗೂ ಕನ್ನಡ ನೆಲೆ ಜಲ ಭಾಷೆಯ ವಿಚಾರ, ಹೀಗೆ ರಾಜ್ಯದ ಹಿತ ಕಾಪಾಡುವ ಸಾಮರ್ಥ್ಯವಿರುವ ಪಕ್ಷಕ್ಕೆ ಬೆಂಬಲಿಸಬೇಕೆಂಬ ಉದ್ದೇಶದಿಂದ ಜೆಡಿಎಸ್ ಬೆಂಬಲಿಸುತ್ತಿರುವುದಾಗಿ ಅವರು ಹೇಳಿದ್ದಾರೆ.
ಶಿಬಿರ ಸಮಾರೋಪ
ಶಿವಮೊಗ್ಗ: ಗೋವಿಂದ ವಸಂತ ಗ್ರಾಮೀಣಾಭಿವೃದ್ಧಿ ಫೌಂಡೇಶನ್ ಹಮ್ಮಿಕೊಂಡ ಬೇಸಿಗೆ ಶಿಬಿರದ ಸಮಾರೋಪ ಏಪ್ರಿಲ್ 28ರಂದು ಹಮ್ಮಿಕೊಂಡಿದೆ. ಹೊಸೂಡಿಯ ಜಿ.ಜಿ. ಕ್ಯಾಂಪ್ನಲ್ಲಿ ಅಂದು ಬೆಳಿಗ್ಗೆ 10.30ರಿಂದ ಕಾರ್ಯಕ್ರಮ ನಡೆಯಲಿದ್ದು, ನಿವೃತ್ತ ಪ್ರಾಧ್ಯಾಪಕ ಪ್ರೊ. ಜೇಕಬ್ ಕೆನಡಿ, ಬಸವಕೇಂದ್ರದ ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು. ನಿವೃತ್ತ ಪ್ರಾಂಶುಪಾಲಸುರೇಶ್, ನಿವೃತ್ತ ಬಿಇಓ ಹನುಮಾನ್, ರಾಜ್ಯ ವಿಜ್ಞಾನ ಪರಿಷತ್ನ ಶೇಖರ್ ಗೌಳೇರ್ ಇರುವರು.