ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಸುದ್ದಿ ಸಂಕ್ಷೇಪ

Mainashree
Updated On : 28 Apr 2013, 12:02 pm

ಇಂದು ರಮ್ಯಾ,ಕೃಷ್ಣ ಪ್ರಚಾರ
ಶಿವಮೊಗ್ಗ: ಜಿಲ್ಲೆಯ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ಮಾಡಲು ಇಂದಿನಿಂದ  ಸ್ಟಾರ್ ಪ್ರಚಾರಕರು ಆಗಮಿಸಲಿದ್ದಾರೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಆರ್. ಪ್ರಸನ್ನ ಕುಮಾರ್ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಈ ಬಾರಿ ಕಾಂಗ್ರೆಸ್‌ಗೆ ಉತ್ತಮ ಬೆಂಬಲ ವ್ಯಕ್ತವಾಗಿದ್ದು, ಚಲನಚಿತ್ರ ನಟಿಯರಾದ ರಮ್ಯ ಮತ್ತು ಜಯಮಾಲಾ ಸೇರಿದಂತೆ ಪಕ್ಷದ ಹಿರಿಯ ಮುಖಂಡರು ಆಗಮಿಸಿ, ರೋಡ್ ಶೋ ಮೂಲಕ ಕಾಂಗ್ರೆಸ್ ಅಭ್ಯರ್ಥಿಗಳ ಪರ ಮತಯಾಚಿಸಲಿದ್ದಾರೆ ಎಂದು ತಿಳಿಸಿದರು. 28ರಂದು ತೀರ್ಥಹಳ್ಳಿಯಲ್ಲಿ ಕಾಂಗ್ರೆಸ್ ಮುಖಂಡ ಎಸ್.ಎಂ. ಕೃಷ್ಣ ಪ್ರಚಾರ ಮಾಡಲಿದ್ದು, ನಂತರ ಆಯನೂರಿನಲ್ಲಿ ಬೃಹತ್ ಕಾಂಗ್ರೆಸ್ ಕಾರ್ಯಕರ್ತರ ಸಭೆ ಹಮ್ಮಿಕೊಳ್ಳಲಾಗಿದೆ. ಸಭೆಯಲ್ಲಿ ಕಾಗೋಡು ತಿಮ್ಮಪ್ಪ, ಇಬ್ರಾಹಿಂ ಪಾಲ್ಗೊಳ್ಳಲಿದ್ದಾರೆ. 28 ಅಥವಾ 29 ರಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಭಾಗವಹಿಸುವ ನಿರೀಕ್ಷೆ ಇದೆ ಎಂದರು. ಇದೇ ವೇಳೆ ಸತೀಶ್‌ಗೌಡ ಕೆಜೆಪಿ ತೊರೆದು ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು.

ಕೆಜೆಪಿ, ಕಾಂಗ್ರೆಸ್ ಮತಯಾಚನೆ
ಶಿರಾಳಕೊಪ್ಪ: ಪಟ್ಟಣದಲ್ಲಿ ಕೆಜೆಪಿ ಹಾಗೂ ಕಾಂಗ್ರೆಸ್ ತಮ್ಮ ಪ್ರಚಾರ ತೀವ್ರಗೊಳಿಸಿದ್ದು, ಪ್ರತಿ ಮನೆಮನೆಗೆ ತೆರಳಿ ಮತಯಾಚನೆ ಮಾಡಿದರು.
ಕಾಂಗ್ರೆಸ್‌ನ ಶಾಂತವೀರಪ್ಪಗೌಡ, ರಾಮಲಿಂಗಪ್ಪ, ಫಕ್ಕೀರಪ್ಪ ಸೇರಿದಂತೆ ಹಲವು ಮುಖಂಡರು ತಮ್ಮ ಕಾರ್ಯಕರ್ತರೊಂದಿಗೆ ಮತಯಾಚಿಸಿದರೆ ಇನ್ನೊಂದೆಡೆ ಯಡಿಯೂರಪ್ಪನವರ ಪುತ್ರಿ, ಸೊಸೆ ಸೇರಿ ಕೆಜೆಪಿ ಕಾರ್ಯಕರ್ತರು ಮತಯಾಚಿಸಿದರು. ಸಮೀಪದ ಹಿರೇಜಂಬೂರ ಗ್ರಾಮದಲ್ಲಿ ಕಾಂಗ್ರೆಸ್ ತನ್ನ ಚುನಾವಣಾ ಪ್ರಚಾರ ನಡೆಸಿದರೆ ಇನ್ನೊಂದೆಡೆ ಸಂಸದ ರಾಘವೇಂದ್ರ ತಮ್ಮ ಅಭಿವೃದ್ಧಿ ವೀಕ್ಷಿಸಿ ಗ್ರಾಮದಲ್ಲಿ ಗ್ರಾಮಸ್ಥರ ಸಮಸ್ಯೆ ಆಲಿಸಿದರು.
ಒಟ್ಟಾರೆ ಕೆಜೆಪಿ, ಕಾಂಗ್ರೆಸ್ ತಮ್ಮ ತಮ್ಮ ಜಿದ್ದಾಜಿದ್ದಿ ಪ್ರದರ್ಶನ ನಡೆಸಿದ್ದು, ಮತದರರನ್ನು ತಮ್ಮ ಕಡೆಗೆ ಸೆಳೆಯಲು ಪ್ರಯತ್ನ ನಡೆಸಿದ್ದಾರೆ.
ಕಾಂಗ್ರೆಸ್ ಸೇರ್ಪಡೆ: ಜಿಪಂ ಮಾಜಿ ಅಧ್ಯಕ್ಷ ಜೆ. ಫಕ್ಕೀರಪ್ಪ ತಮ್ಮ ಅನುಯಾಯಿಗಳೊಂದಿಗೆ ಕಾಂಗ್ರೆಸ್ ಸೇರಿದ್ದಾರೆ. ಈ ಮೊದಲು ಬಿಎಸ್‌ಆರ್ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡು ಆ ಪಕ್ಷದ ಅಭ್ಯರ್ಥಿಯಾಗಿ ಶಿಕಾರಿಪುರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದರು. ಆದರೆ ಈಗ ಆ ಪಕ್ಷ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಅಲ್ಲದೆ ಹಾಲಿ ಅಲ್ಲಿಯ ಪಕ್ಷೇತರ ಗ್ರಾಪಂ ಸದಸ್ಯ ಶಶಿಧರ ಮತ್ತು ಕಾಂಗ್ರೆಸ್‌ನ ಬಸವರಾಜ್, ಮಾಜಿ ಶಾಸಕ ಹಾಗೂ ಕೆಜೆಪಿ ಧುರೀಣ ಮಹಲಿಂಗಪ್ಪನವರ ಸಮ್ಮಖದಲ್ಲಿ ಕೆಜೆಪಿ ಸೇರಿದರು.  ಬಿಎಸ್‌ಆರ್ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಹಾಗೂ ಬಣಜಾರ ಸಂಘದ ನಾಯಕ ಗಂಗ್ಯಾನಾಯ್ಕ ಶನಿವಾರ ಸಂಜೆ ರಾಗಿಕೊಪ್ಪ ಗ್ರಾಮದಲ್ಲಿ ಅಗಡಿ ಅಶೋಕ ಮಹಾಲಿಂಗಪ್ಪ ಹಾಗೂ ಇತರ ಹಲವಾರು ನಾಯಕರ ಸಮ್ಮುಖದಲ್ಲಿ ಕೆಜೆಪಿ ಸೇರಿರುವದಾಗಿ ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ  ಅಶೋಕ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement