ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಕಾಂಗ್ರೆಸ್ ಅಧಿಕಾರಕ್ಕೇರುವುದು ಖಚಿತ

Lingaraj Badiger
Updated On : 29 Apr 2013, 10:44 am

ಕ.ಪ್ರ.ವಾರ್ತೆ, ತೀರ್ಥಹಳ್ಳಿ, ಏ.28 ರಾಜ್ಯದಲ್ಲಿ ಕಾಂಗ್ರೆಸ್ ಈ ಬಾರಿ ಅಧಿಕಾರಕ್ಕೆ ಬಂದೇ ಬರುತ್ತದೆ ಎಂದು ಕೇಂದ್ರ ಮಾಜಿ ಸಚಿವ ಎಸ್.ಎಂ. ಕೃಷ್ಣ ವಿಶ್ವಾಸ ವ್ಯಕ್ತಪಡಿಸಿದರು.
   ತೀರ್ಥಹಳ್ಳಿ ಪಟ್ಟಣದಲ್ಲಿ  ಕಾಂಗ್ರೆಸ್ ಅಭ್ಯರ್ಥಿ ಕಿಮ್ಮನೆ ರತ್ನಾಕರ್ ಪರವಾಗಿ ಹಮ್ಮಿಕೊಂಡಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಈ ಬಾರಿ ಹಣದ ಚೀಲ ಮತದಾರರನ್ನು ಕೊಳ್ಳಲು  ಪ್ರಯತ್ನಿಸುತ್ತಿದೆ. ಇದರ ವಿರುದ್ಧ ಸಿಡಿದೆದ್ದು ನಿಲ್ಲಬೇಕು. ಇಲ್ಲದಿದ್ದರೆ  ಹಣದ ಎದುರು ಪ್ರಾಮಾಣಿಕತೆ ಸೋಲಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.  
ದೃಢತೆ ಇರಲಿ: ತೀರ್ಥಹಳ್ಳಿ ಕ್ಷೇತ್ರದ ಜನರಲ್ಲಿ ಶಾಂತವೇರಿ ಗೋಪಾಲಗೌಡರ ದೃಢತೆ ಎದ್ದು ಕಾಣಬೇಕಾಗಿದೆ.  ರಾಜ್ಯದಲ್ಲಿ ಕೆಜೆಪಿ- ಬಿಜೆಪಿ ಕಾರ್ಯವೈಖರಿ ತೆರೆದ ಪುಸ್ತಕವಾಗಿದೆ. 3 ಜನ ಮುಖ್ಯಮಂತ್ರಿಗಳನ್ನು ಬದಲಿಸಿದ್ದರೂ ರಾಜ್ಯ ಅಭಿವೃದ್ಧಿಯಲ್ಲಿ  ಬದಲಾವಣೆ ಅಷ್ಟಕಷ್ಟೇ ಎಂದು ಹೇಳಿದರು.   
 ದೇಶದಲ್ಲಿ ಹಿಂದೆ ಕರ್ನಾಟಕ ಒಂದು ಮಾದರಿ ರಾಜ್ಯವಾಗಿತ್ತು. ಆದರೆ ಬಿಜೆಪಿ ಸರ್ಕಾರದ ಅವಧಿ ಪರಪ್ಪನ ಅಗ್ರಹಾರದ ಅವಧಿಯಾಗಿತ್ತು. ರಾಜ್ಯದ ಆಡಳಿತಕ್ಕೆ ಇದೊಂದು ಕಳಂಕವಾಗಿದೆ ಎಂದರು.   13 ಮಂತ್ರಿಗಳು ಜೈಲು ಸೇರಿದ್ದರು. ಈ ಪರಿಸ್ಥಿತಿಯನ್ನು ನಾವ್ಯಾರೂ ನಿರೀಕ್ಷೆ ಮಾಡಿರಲಿಲ್ಲ. ಇತ್ತೀಚೆಗೆ  ಬಿಜೆಪಿಯ ಸುಷ್ಮಾ ಸ್ವರಾಜ್ ದೊಡ್ಡ ಮಾತುಗಳನ್ನಾಡುತ್ತಿದ್ದ ಸಭೆಯಲ್ಲಿ ಅವರ ಪಕ್ಕದಲ್ಲೇ ಕಟ್ಟಾ ಸುಬ್ರಹ್ಮನಾಯ್ಡು ಕೂತಿದ್ರು.  ಆದರೆ ಅವರಿಗೆ ವ್ಯಾಲ್ಯೂ ಸಿಸ್ಟಂ ಬಗ್ಗೆ ಗೊತ್ತಿಲ್ಲ ಎಂದು ಹೇಳಿದರು.   
 ಕಾಂಗ್ರೆಸ್ ಅಭ್ಯರ್ಥಿ ಕಿಮ್ಮನೆ ರತ್ನಾಕರ್ ಮಾತನಾಡಿ, ತೀರ್ಥಹಳ್ಳಿ ಕ್ಷೇತ್ರದ ಅಭಿವೃದ್ಧಿಗಾಗಿ ಪಕ್ಷಭೇದ  ಮರೆತು ಕೆಲಸ ಮಾಡಿದ್ದೇನೆ. 200 ಕಿಮೀ ವ್ಯಾಪ್ತಿಯ ಕ್ಷೇತ್ರದಲ್ಲಿ ಗ್ರಾಮೀಣ ಪ್ರದೇಶ ಅಭಿವೃದ್ಧಿಗಾಗಿ 600 ಕಿಮೀ ರಸ್ತೆಯ ಅಗತ್ಯವಿದೆ. ಮತದಾರರು ಅಭಿವೃದ್ಧಿ ಕೆಲಸ ಮಾಡಲು ಆಶೀರ್ವಾದಿಸಲು ವಿನಂತಿಸಿದರು.
 ಸೊರಬ ಕ್ಷೇತ್ರದ ಅಭ್ಯರ್ಥಿ ಕುಮಾರ್ ಬಂಗಾರಪ್ಪ, ಸಂಸದ ಜಯಪ್ರಕಾಶ ಶೆಟ್ಟಿ, ಕೇಂದ್ರದ ವೀಕ್ಷಕ ಜಿತೇಂದ್ರ ದೇಶ ಪ್ರಭು, ಸಂಜಯ್, ಮಾಜಿ ಶಾಸಕ ಬಿ. ಸ್ವಾಮಿರಾವ್, ಜೆ.ಡಿ. ನಾರಾಯಣಪ್ಪ, ಜಿಲ್ಲಾಧ್ಯಕ್ಷ ಪ್ರಸನ್ನ ಕುಮಾರ್ ಮೊದಲಾದವರು ವೇದಿಕೆಯಲ್ಲಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement