ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಕಾಂಗ್ರೆಸ್ ಅಭ್ಯರ್ಥಿ ಮತಯಾಚನೆ

Lingaraj Badiger
Updated On : 29 Apr 2013, 10:52 am

ಶಿವಮೊಗ್ಗ: ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ. ಪ್ರಸನ್ನ ಕುಮಾರ್ ಪರವಾಗಿ ನಗರದ ಬಿ.ಬಿ ರಸ್ತೆ ನಿವಾಸಿಗಳು ಭಾನುವಾರ ಮತ ಯಾಚಿಸಿದರು. ಇಲ್ಲಿನ ಲಕ್ಷ್ಮೀನಾರಾಯಣಸ್ವಾಮಿ ದೇವಸ್ಥಾನದಲ್ಲಿ ಬೆಳಿಗ್ಗೆ 8.30ಕ್ಕೆ ಪೂಜೆ ಸಲ್ಲಿಸಿ, ನಂತರ ಮತಯಾಚಿಸಿದರು.
ಕೆ.ಆರ್.ಪುರಂ, ರವಿವರ್ಮ ಬೀದಿ, ತಿಮ್ಮಪ್ಪನಕೊಪ್ಪಲು, ಕುಂಬಾರಗುಂಡಿಯ ಸುತ್ತ- ಮುತ್ತ ಪ್ರಚಾರ ಮಾಡಿದರು. ಈ ವೇಳೆ ಹರಿಪ್ರಿಯ ಭಜನಾ ಮಂಡಳಿಯ ಅಧ್ಯಕ್ಷೆ ರುಕ್ಮಿಣಿ ವೇದವ್ಯಾಸ, ವಾರಿಜಾ ಜಗದೀಶ್, ಗಾಯತ್ರಿ ಕೃಷ್ಣಮೂರ್ತಿ, ವಿಶ್ವೇಶ್ವರ ಕೋ-ಆಪರೇಟಿವ್ ಸೊಸೈಟಿ ಸದಸ್ಯ ಕೆ.ಎಚ್. ಶೇಷಪ್ಪ ಸ್ಥಳೀಯರು ಇದ್ದರು.
ಕೆಜೆಪಿಗೆ ಸೇರ್ಪಡೆ
ಜೋಗ್‌ಫಾಲ್ಸ್, ಏ.28 ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಲಕ್ಷ್ಮೀ ರಾಜು ಇತ್ತೀಚಿಗೆ ಜೋಗ್ ಕಾರ್ಗಲ್ ಪಪಂ ವ್ಯಾಪ್ತಿಯ ಅಧ್ಯಕ್ಷ ಜೆ.ಎಸ್. ಚಂದ್ರಶೇಖರ್ ಭಟ್ ಅವರ ಮುಖಂಡತ್ವದಲ್ಲಿ ಇಲ್ಲಿಗೆ ಸಮೀಪದ ಮಂಡಗಳಲೆ ಆದಿಶಕ್ತಿ ನಾಗದೇವತೆ ದೇವಾಲಯದಲ್ಲಿ ಕೆಜೆಪಿಗೆ ಸೇರ್ಪಡೆಗೊಂಡರು.
  ಈ ಸಂದರ್ಭದಲ್ಲಿ ಮಾತನಾಡಿದ ಜೋಗ್ ಕಾರ್ಗಲ್ ಪಪಂ ವ್ಯಾಪ್ತಿಯ ಅಧ್ಯಕ್ಷ ಜೆ.ಎಸ್. ಚಂದ್ರಶೇಖರ್ ಭಟ್, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಅಭಿವೃದ್ಧಿ ಕಾರ್ಯಗಳನ್ನು ಕಂಡು ಮತ್ತು ಮುಂದಿನ ದಿನಗಳಲ್ಲಿ ಅಭಿವೃದ್ಧಿ ಕಾರ್ಯ ಬೆಂಬಲಿಸಲು ಕೆಜೆಪಿಗೆ ಹೆಚ್ಚಿನ ಜನ ಸೇರ್ಪಡೆಗೊಳ್ಳುತ್ತಿದ್ದು, ಭ್ರಷ್ಟಾಚಾರ ಮುಕ್ತ ಮತ್ತು ಅಭಿವೃದ್ಧಿ ಪರ ಚಿಂತನೆ ಹೊಂದಿರುವ ಕೆಜೆಪಿ ಅಭ್ಯರ್ಥಿ ಬಿ.ಆರ್. ಜಯಂತ್ ಅವರನ್ನು ಬೆಂಬಲಿಸಬೇಕು ಎಂದು ತಿಳಿಸಿದರು.
 ಕೆಜೆಪಿ ಮುಖಂಡ ಮುನಿರಾಜ್ ಜೈನ್, ದೇವರಾಜ್ ಜೈನ್, ರತ್ನಾಕರ್ ಮಲ್ಲಕ್ಕಿ, ನಾಗರಾಜ್ ಲಿಂಗನಮಕ್ಕಿ  ಹಾಜರಿದ್ದರು.
ಕೆಜೆಪಿ ಗೆಲುವು ನಿಶ್ಚಿತ: ವಿಶ್ವಾಸ
ತರೀಕೆರೆ: ಕೆಜೆಪಿ ಅಭ್ಯರ್ಥಿ ಡಿ.ಎಸ್. ಸುರೇಶ್ ಅವರ ಗೆಲವು ನಿಶ್ಚಿತ ಎಂದು ಕೆಜೆಪಿ ಮುಖಂಡರು ಮಿಲ್ಟ್ರಿ ಶ್ರೀನಿವಾಸ್ ಹೇಳಿದರು.  ಅವರು ಪಟ್ಟಣದಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ಹಮಾಲಿ ಕಾರ್ಮಿಕರ ಸಂಘದ ಸದಸ್ಯರು ಕೆಜೆಪಿಗೆ ಸೇರ್ಪಡೆ ಸಮಾರಂಭದ ಸಂದರ್ಭದಲ್ಲಿ ಮಾತನಾಡಿದರು.
 ಕ್ಷೇತ್ರದ ವಿಧಾನಸಭಾ ಚುನಾವಣೆಯ ಕೆಜೆಪಿ ಅಭ್ಯರ್ಥಿ ಡಿ.ಎಸ್. ಸುರೇಶ್ ಸಾತ್ವಿಕ ಸ್ವಭಾವದವರಾಗಿದ್ದು, ತಾಲೂಕಿನಾದ್ಯಂತ ಹೆಚ್ಚಿನ ಅಭಿವೃದ್ಧಿ ಕಾರ್ಯಕ್ರಮ ನಿರ್ವಹಿಸಿದ್ದು, ಕ್ಷೇತ್ರದ ಜನತೆಯ ಪ್ರೀತಿ ವಿಶ್ವಾಸ ಪಡೆದಿದ್ದಾರೆ ಎಂದರು. ಕೆಜೆಪಿ ಮುಖಂಡ ಡಿ.ಎಸ್.ಗಿರೀಶ್ ಅವರು ಕೆಜೆಪಿ ಪಕ್ಷಕ್ಕೆ ಸೇರ್ಪಡೆಯಾದ  ಹಮಾಲಿ ಕಾರ್ಮಿಕರ ಸಂಘದ ಸದಸ್ಯರನ್ನು ಸ್ವಾಗತಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement