ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಕೆಜೆಪಿ ಬೆಂಬಲಿಸಿ : ಮಹಾಲಿಂಗಪ್ಪ

Lingaraj Badiger
Updated On : 29 Apr 2013, 10:52 am

ಶಿರಾಳಕೊಪ್ಪ :ದಲಿತರಿಗೆ, ಶೋಷಿತರಿಗೆ ಹಾಗೂ ಹಿಂದುಳಿದವರಿಗೆ ನ್ಯಾಯ ದೊರಕಿಸಿಕೊಡಬೇಕಿಂದಿದ್ದರೆ ಅದು ಕೆಜೆಪಿ ಅಧ್ಯಕ್ಷ ಯಡಿಯೂರಪ್ಪ ಅವರಿಂದ ಮಾತ್ರ ಸಾಧ್ಯ ಎಂದು ಕೆಜೆಪಿ ನಾಯಕ ಮಹಾಲಿಂಗಪ್ಪ ಹೇಳಿದರು.
  ಶಿರಾಳಕೊಪ್ಪ ಹತ್ತಿರದ ಹಿರೇಜಂಬೂರ ಗ್ರಾಮದಲ್ಲಿ ಕಾರ್ಯಕರ್ತರೊಂದಿಗೆ ಮಾತನಾಡಿ, ನಾನು ಯಡಿಯೂರಪ್ಪನವರ ಕಾರ್ಯವೈಖರಿಯನ್ನು ನೋಡಿ ಅವರೊಂದಿಗೆ ಸೇರಿ ಉತ್ತಮ ಕಾರ್ಯನಿರ್ವಹಿಸಬೇಕೆಂದು ಕೆಜೆಪಿ ಸೇರಿರುವದಾಗಿ ತಿಳಿಸಿದ ಅವರು, ನಿಮ್ಮೆಲ್ಲರ ಸಹಕಾರವಿದ್ದರೆ ಈ ಬಾರಿ ಕೆಜೆಪಿ ಗೆಲ್ಲಲಿದೆ ಎಂದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಗಡಿ ಅಶೋಕ ಮಾತನಾಡಿ, ಹಿಂದೆಂದಿಗಿಂತಲೂ ಹೆಚ್ಚಾಗಿ ಗ್ರಾಮಗಳಲ್ಲಿ ಆಗಿರುವಂತಹ ಕೆಲಸ ಕಾರ್ಯಗಳು ಸಹಕಾರಿ ಬ್ಯಾಂಕ್‌ಗಳಲ್ಲಿ ಶೇ.1ರಂತೆ ಹಾಗೂ ಬಡ್ಡಿ ರಹಿತ ಸಾಲ, ಎರಡು ಬಾರಿ ರೈತರ ಸಾಲ ಮನ್ನಾದಂತಹ ಉತ್ತಮಕಾರ್ಯ ಮಾಡಿರುವ ಯಡಿಯೂರಪ್ಪನವರ ಕೈ ಬಲಪಡಿಸಿ ಈ ಬಾರಿಯ ಚುನಾವಣೆಯಲ್ಲಿ ಅತ್ಯಂತ ಹೆಚ್ಚಿನ ಅಂತರದಿಂದ ಗೆದಿಸಬೇಕು ಎಂದು ಹೇಳಿದರು.
ಹಿರೇಜಂಬೂರ ಗ್ರಾಮದಲ್ಲಿ ಕಾಂಗ್ರೆಸ್‌ನಲ್ಲಿದ್ದ ಪಕ್ಷೇತರ ಗ್ರಾಪಂ ಸದಸ್ಯರಾದ ಶಶಧರ ಹಾಗೂ ಬಸವರಾಜಪ್ಪ ಕಾಂಗ್ರೆಸ್ ಹಿರೇಜಂಬೂರ ಗ್ರಾಮದಲ್ಲಿ ಕಾಂಗ್ರೆಸ್‌ನಲ್ಲಿದ್ದ ಪಕ್ಷೇತರ ಗ್ರಾಪಂ ಸದಸ್ಯರಾದ ಶಶಧರ ಹಾಗೂ ಬಸವರಾಜಪ್ಪ ಕಾಂಗ್ರೆಸ್ ತೊರೆದು ಕೆಜೆಪಿ ಸೇರಿದರು. ಮಾಜಿ ಶಾಸಕ ಮಹಲಿಂಗಪ್ಪ ಅವರು ಪಕ್ಷಕ್ಕೆ ಬರಮಾಡಿಕೊಂಡರು.
    ಕಾರ್ಯಕ್ರಮದಲ್ಲಿ ನಾಯಕರಾದ ಜಿಪಂ ಸದಸ್ಯ ಬಂಗಾರನಾಯ್ಕ್,ಬಸವನಗೌಡ, ಕೋಡಿಕೊಪ್ಪದ ಮಂಜಣ್ಣ ಹಾಗೂ ಇತರ ಹಲವಾರು ಪ್ರಮುಖರು ಈ ಸಂದರ್ಭದಲ್ಲಿ  ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement