ಪೊಲೀಸ್ ಪೇದೆ ಆತ್ಮಹತ್ಯೆ
ಶಿವಮೊಗ್ಗ: ಕರ್ತವ್ಯದ ಒತ್ತಡದ ಹೆಚ್ಚಾಗಿ ಪೊಲೀಸ್ ಪೇದೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದಲ್ಲಿ ಭಾನುವಾರ ನಡೆದಿದೆ. ಪಂಚಾಕ್ಷರಯ್ಯ ಮೃತ ವ್ಯಕ್ತಿ. ಇವರು ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನಕಲಿ ವೈದ್ಯನ ವಿರುದ್ಧ ಪ್ರಕರಣ
ಶಿವಮೊಗ್ಗ: ಜಿಲ್ಲಾಧಿಕಾರಿ ಅವರ ಆದೇಶದಂತೆ ಚಾಂದ್ಸಿ ಕ್ಲಿನಿಕ್ ಬಾಗಿಲು ಮುಚ್ಚಿಸಿದ್ದರೂ ಸಹ ಬಿಸ್ವಜಿತ್ಕುಮಾರ್ಹ್ಜ್ರ ಅವರು ವಿದ್ಯಾನಗರದ ತಮ್ಮ ಮನೆಯಲ್ಲಿಯೇ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದರು. ಅರ್ಹ ವೈದ್ಯನೆಂದು ಯಾವುದೇ ಪ್ರಮಾಣ ಪತ್ರ ಹೊಂದದೇ ಇದ್ದರು ಚಿಕಿತ್ಸೆ ನೀಡುತ್ತಿದ್ದ ಇವರ ವಿರುದ್ಧ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಪರವಾಗಿ ನೋಡಲ್ ಅಧಿಕಾರಿ ಕೃಷ್ಣರಾವವ್ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ರಸ್ತೆ ಅಪಘಾತ
ಶಿವಮೊಗ್ಗ- ನವುಲೆಯ ಕಾರ್ತಿಕ್ ಅವರು ಬೈಕ್ನಲ್ಲಿ ಹೋಗುತ್ತಿದ್ದಾಗ ಮಾರುತಿ ಓಮ್ನಿ ವಾಹನವು ಡಿಕ್ಕಿ ಹೊಡೆದಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಶಿವಮೊಗ್ಗ ಪಶ್ಚಿಮ ಠಾಣೆಯಲ್ಲಿ ದೂರು ದಾಖಲಾಗಿದೆ. ಇನ್ನೊಂದು ಪ್ರಕರಣದಲ್ಲಿ ಹಾಷಂ ಎಂಬುವರು ಎನ್ಟಿ ರಸ್ತೆಯಲ್ಲಿ ನಿಂತಿದ್ದಾಗ ಕಾಮತ್ ಪೆಟ್ರೋಲ್ ಬಂಕ್ ಕಡೆಯಿಂದ ಬಂದ ಕಾರು ಡಿಕ್ಕಿ ಹೊಡೆದಿದೆ.
ಬೈಕ್ ಡಿಕ್ಕಿ
ಶಿವಮೊಗ್ಗ: ತಾಯಿ-ಮಗ ನಡೆದುಕೊಂಡು ಬರುವಾಗ ಬೈಕ್ ಡಿಕ್ಕಿ ಹೊಡೆದು ಇಬ್ಬರೂ ಗಾಯಗೊಂಡ ಘಟನೆ ನಗರದ ಬಾಲರಾಜ ಅರಸ್ರ್ಸ್ತೆಯಲ್ಲಿ ನಡೆದಿದೆ. ಮಂಜುಳಾ ಹಾಗೂ ಅವರ 6 ವರ್ಷದ ಮಗ ಪ್ರಜ್ವಲಲ್ಗಾಯಗೊಂಡವರು. ಕೆಇಬಿ ಸರ್ಕಲ್ನಿಂದ ನಡೆದುಕೊಂಡು ಬರುವಾಗ ಬೈಕ್ ಡಿಕ್ಕಿ ಹೊಡೆದಿದೆ. ಪ್ರಕರಣ ದಾಖಲಾಗಿದೆ.