ಮತದಾರ ಪಟ್ಟಿ ವಿವರ: ಬಿಜೆಪಿ ಹೆಲ್ಪ್ಲೈನ್
ಶಿವಮೊಗ್ಗ: ಮತದಾರರ ಪಟ್ಟಿಯಲ್ಲಿ ಹೆಸರು, ಬೂತ್ ನಂ, ಕ್ರಮ ಸಂಖ್ಯೆ, ಮತದಾನ ಮಾಡಬೇಕಾದ ಮತಕೇಂದ್ರ ವಿವರ ನೀಡುವುದಕ್ಕಾಗಿ ಬಿಜೆಪಿಯ ಹೈಟೆಕ್ ಪ್ರಚಾರದ ವಿಭಾಗ ಮತದಾರರ ಹೆಲ್ಪ್ಲೆನ್ ಕೇಂದ್ರ ಆರಂಭಿಸಿದೆ. ಈ ಎಲ್ಲಾ ಮಾಹಿತಿಗಳನ್ನು ಮನೆಯಲ್ಲೇ ಕುಳಿತು ಒಂದು ಫೋನ್ ಕರೆ ಮಾಡಿದಲ್ಲಿ ವಿವರಗಳನ್ನು ನೀಡಲಾಗುವುದು ಎಂದು ಜಿಲ್ಲಾ ಮಾಧ್ಯಮ ಪ್ರಮುಖ ಬಾ.ರಾ. ಮಧುಸೂದನ್ ಹೇಳಿದರು. ಶಿವಮೊಗ್ಗದಲ್ಲಿ ಹೊಸದಾಗಿ ಸೇರ್ಪಡೆಯಾದ ಮತದಾರರ ವಿವರ ಒಳಗೊಂಡಂತೆ ಎಲ್ಲಾ ವಿವರಗಳನ್ನು ಈ ಹೆಲ್ಪ್ಲೈನ್ ಅಳವಡಿಸಿಕೊಂಡಿದೆ. ಮೊ. 9900027811, 9900027812, 9900027813, 9900027814 ಈ ನಾಲ್ಕು ನಂಬರ್ಗಳಿಗೆ ಕರೆ ಮಾಡಬಹುದು. ಈ ಕೇಂದ್ರವು ಮೇ 5ರ ಸಂಜೆಯವರೆಗೂ ಕೆಲಸ ಮಾಡಲಿದೆ.