ಮೇ 1ರಂದು ಸಮನ್ವಿತಾ ಜನಾರ್ದನ್ ರಂಗಪ್ರವೇಶ
ಸಾಗರ: ಇಲ್ಲಿನ ನಾಟ್ಯತರಂಗ ಸಂಸ್ಥೆ ಮೇ 1ರಂದು ಸಂಜೆ 5-30ಕ್ಕೆ ನಗರದ ಕಾಗೋಡು ತಿಮ್ಮಪ್ಪ ರಂಗಮಂದಿರದಲ್ಲಿ ವಿದುಷಿ ಸಮನ್ವಿತಾ ಜನಾರ್ದನ್ ಅವರ ಭರತನಾಟ್ಯ ರಂಗ ಪ್ರವೇಶ ಕಾರ್ಯಕ್ರಮ ಹಮ್ಮಿಕೊಂಡಿದೆ. ನಿವೃತ್ತ ಪ್ರಾಚಾರ್ಯ ಆರ್.ಎಂ. ಬಾಪಟ್ ಅಧ್ಯಕ್ಷತೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಕಾಗೋಡು ತಿಮ್ಮಪ್ಪ, ಅಪರ ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ, ಬೆಂಗಳೂರು ಕಲಾತೀರ ಸಂಸ್ಥೆಯ ಖ್ಯಾತ ಓಡಿಸ್ಸಿ ನೃತ್ಯ ಕಲಾವಿದ ಉದಯಕುಮಾರ್ ಶೆಟ್ಟಿ, ಹಿರಿಯ ನೃತ್ಯ ವಿಮರ್ಶಕ ಕೊಗರ್ ಶಂಕರನಾರಾಯಣ ಉಪಾಧ್ಯಾಯ, ಬೆಂಗಳೂರು ಅನನ್ಯ ಸಂಸ್ಥೆಯ ರಾಘವೇಂದ್ರ ರಾವ್ ಪಾಲ್ಗೊಳ್ಳಲಿದ್ದಾರೆ ಎಂದರು. ಸಭಾ ಕಾರ್ಯಕ್ರಮದ ನಂತರ ವಿದುಷಿ ಸಮನ್ವಿತಾ ಜನಾರ್ದನ್ ಅವರಿಂದ ಪುಷ್ಪಾಂಜಲಿ ಪಾಲ್ಗೊಳ್ಳಲಿದ್ದಾರೆ.