ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಅನಂತ್ ಇದ್ದರೆ ಆಡ್ವಾಣಿ ಪಿಎಂ ಆಗಲ್ಲ

Lingaraj Badiger
Updated On : 30 Apr 2013, 11:02 am

ಕ.ಪ್ರ.ವಾರ್ತೆ, ಸೊರಬ, ಏ.29
ಬಿಜೆಪಿ ಪಕ್ಷದ ಆಡ್ವಾಣಿಯವರು ದೇಶದ ಪ್ರಧಾನಿಯಾಗುವ ಕನಸು ಕಾಣುವುದು ತಪ್ಪಲ್ಲ. ಆದರೆ, ಅನಂತ್ ಕುಮಾರ್ ಅಂತವರು ಅವರ ದಿಂಬಿನಡಿಯ ಅಲಾರಾಂನಂತೆ ಇರುವ ತನಕವೂ ಅವರ ಪ್ರಧಾನಿ ಕನಸು ನನಸಾಗಲು ಸಾಧ್ಯವಿಲ್ಲ ಎಂದು ಕೆಜೆಪಿ ಸೊರಬ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಹರತಾಳು ಹಾಲಪ್ಪ ವ್ಯಂಗ್ಯವಾಡಿದರು.
ಪ್ರಸಕ್ತ ಚುನಾವಣೆ ಅಭ್ಯರ್ಥಿಯಾಗಿರುವ ಅವರು ಸೊರಬ ಕ್ಷೇತ್ರದ ಪ್ರತಿ ಗ್ರಾಮಕ್ಕೆ ತೆರಳಿ ಮತಯಾಚಿಸುತ್ತಿದ್ದು, ಉಳವಿಯಲ್ಲಿ ನಡೆದ ಬಹಿರಂಗ ಸಭೆ ಉದ್ದೇಶಿಸಿ ಮಾತನಾಡಿದರು.
ರಾಜಕೀಯ ದುರುದ್ದೇಶ: ದಂಡಾವತಿ ಯೋಜನೆ ಕುರಿತಂತೆ ಜೆಡಿಎಸ್ ನಾಯಕರು ನೇರ ನನ್ನ ಮೇಲೆ ಆಪಾಧಿಸಲಾಗುತ್ತಿದ್ದಾರೆ. ಆದರೆ, 1985ರಲ್ಲಿ ಬಂಗಾರಪ್ಪ ಅವರೇ ಯೋಜನೆ ಕುರಿತು ಸಮ್ಮತಿ ಕೋರಿ ಪತ್ರ ಬರೆದಿದ್ದರು. ನನ್ನ ಅವಧಿಯಲ್ಲಿ ಯೋಜನೆಗೆ ಒತ್ತು ನೀಡಿದ್ದನ್ನು ಸಹಿಸದ ಅವರು 40 ವರ್ಷದ ರಾಜಕೀಯ ದಿನಗಳಲ್ಲಿ ಮಾಡದ್ದನ್ನು ಮಾಡಿ ಬಿಡುತ್ತೇನೆ ಎಂದು ರಾಜಕೀಯ ದ್ವೇಷಕ್ಕಾಗಿ ಮನಸ್ಸಿಗೆ ಬಂದಂತೆ ಮಾತನಾಡುತ್ತಿರುವುದು ಜನತೆಯ ಮೇಲೆ ಇರುವ ಅವರ ಅಪಾರ ಕಾಳಜಿಯ ಇನ್ನೊಂದು ಮುಖವನ್ನು ಪ್ರದರ್ಶಿಸಿಕೊಂಡಂತಾಗಿದೆ ಎಂದು ಲೇವಡಿಸಿದರು.
ನಮ್ಮ ಆಡಳಿತ ಬಂದ ನಂತರ ತಾಲೂಕಿನ 132 ಕೆರೆ ಹೂಳು, ಆನವಟ್ಟಿಯಲ್ಲಿ 5 ಕೋಟಿ ವೆಚ್ಚದ ಪ್ರಥಮದರ್ಜೆ ಕಾಲೇಜು ಕಟ್ಟಡ, ಡಿಎಡ್ ಕಟ್ಟಡ, ಸಂಪರ್ಕವಿಲ್ಲದ ಕೋಡಂಬಿಗೆ ಸೇತುವೆ ನಿರ್ಮಾಣ, ಹಲವಾರು ರೈತ ಕಾಯಕಕ್ಕೆ ನೆರವಾಗುವ ಬ್ಯಾರೇಜ್, ತಾಲೂಕಿನೆಲ್ಲೆಡೆ ವ್ಯವಸ್ಥಿತ ರಸ್ತೆ, ಪಟ್ಟಣದ ಬೃಹತ್ ರಂಗಮಂದಿರ ಮುಂತಾದ ಕ್ಷೇತ್ರದ ಅಭಿವೃದ್ಧಿ ಹಿನ್ನೆಲೆಯಲ್ಲಿ ಉದ್ದನೆಯೆ ಪಟ್ಟಿಯೆ ಪ್ರತಿಸ್ಪರ್ಧಿಗಳನ್ನು ಕಂಗೆಡಿಸಿದೆ ಎಂದರು.
ಅಡ್ಡದಾರಿಯ ಮೂಲಕ ನನ್ನನ್ನು ಸೋರಿಸುವ ಪ್ರಯತ್ನ ಮಾಡುತ್ತಿದ್ದಾರೆ.  ಮತದಾರರು ಇಂತಹ ಅಸಂಬದ್ಧ ಮಾತುಗಳಿಗೆ ಮರುಳಾಗದೆ ಅಭಿವೃದ್ಧಿ ಚಿಂತನೆಯ ಬಿ.ಎಸ್. ಯಡಿಯೂರಪ್ಪ ನಾಯಕತ್ವಕ್ಕೆ ಕೆಜೆಪಿ ಬೆಂಬಲಿಸಿ ಎಂದು ಕರೆನೀಡಿದರು.
ಪಕ್ಷದ ತಾಲೂಕು ಅಧ್ಯಕ್ಷ ಎಂ.ಆರ್. ಪಾಟೀಲ್, ಉಳವಿ ಬೂತ್ ಅಧ್ಯಕ್ಷ ಚಂದ್ರಪ್ಪ, ಜಿಪಂ ಸದಸ್ಯ ಗುರು ಕುಮಾರ್ ಪಾಟೀಲ್, ಮುಖಂಡ ಮಂಜು, ನಾಸೀರ್, ರಾಜಪ್ಪ, ಶಾಂತಪ್ಪ, ಹನುಮಂತಪ್ಪ ಇನ್ನೂ ಅನೇಕರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement