ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಎಚ್ಡಿಕೆ ಸಾಧನೆಯೇ ಶ್ರೀರಕ್ಷೆ: ಬಳಿಗಾರ್

Lingaraj Badiger
Updated On : 30 Apr 2013, 11:02 am

ಕ.ಪ್ರ.ವಾರ್ತೆ, ಶಿರಾಳಕೊಪ್ಪ, ಏ.29
ಕುಮಾರ ಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಕೈಗೊಂಡ ಹಲವಾರು ಜನಪರ ಕಾರ್ಯಕ್ರಮಗಳು ಇಂದಿನ ಚುನಾವಣೆಯಲ್ಲಿ ನನಗೆ ಶ್ರೀರಕ್ಷೆ ಆಗಲಿದೆ. ಹಾಗೆಯೇ ವೀರಶೈವ,ಬಣಜಾರ, ಹಿಂದುಳಿದ ಹಾಗು ಅಲ್ಪಸಂಖ್ಯಾತರು ಯುವಜನಾಂಗದ ಸಂಪೂರ್ಣ ಸಹಕರಾದಿಂದ ನನಗೆ ಗೆಲವು ನಿಶ್ಚಿತ ಎಂದು ಶಿಕಾರಿಪುರ ತಾಲ್ಲೂಕ ಜೆಡಿಎಸ್ ಅಭ್ಯರ್ಥಿಹೆಚ್. ಬಳಿಗಾರ್ ಹೇಳಿದರು.
 ಶಿರಾಳಕೊಪ್ಪ ಪಟ್ಟಣದಲ್ಲಿ ಸೋಮವಾರ ರೋಡ ಶೋ ನಡೆಸಿದ ಅವರು ಪತ್ರಿಕೆಯೊಂದಿಗೆ ಮಾತನಾಡಿ, ಕಳೆದ 6 ತಿಂಗಳಿನಿಂದ ಓಡಾಡುತ್ತಿರುವ ನನಗೆ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಹಾಗು ಮಾಜಿ ಶಾಸಕ ಮಹಲಿಂಗಪ್ಪನವರ ಚುನಾವಣೆಯ ಅನುಭವ ಈ ಬಾರಿ ಚುನಾವಣೆಯಲ್ಲಿ ಗೆಲ್ಲಲು  ಸಹಕಾರಿ ಯಾಗಲಿದೆ ಎಂದರು.
ಅಭಿವೃದ್ಧಿಯಾಗಿಲ್ಲ: ಯಡಿಯೂರಪ್ಪನವರು ಅಧಿಕಾರ ಅವಧಿಯಲ್ಲಿ ಅವರಮೇಲೆ ಬಂದಿರುವ ಭ್ರಷ್ಟಾಚಾರ ಹಾಗು ಶಾಂತವೀರಪ್ಪಗೌಡ ಅವರು 6 ವರ್ಷಕಾಲ ವಿಧಾನಪರಿಷತ್ ಸದಸ್ಯರಿದ್ದಾಗ ಕ್ಷೇತ್ರದಲ್ಲಿ ಒಂದೇ ಒಂದು ಕೆಲಸಮಾಡದೇ, 30ವರ್ಷ ಅವರ ಜೊತೆ ಇದ್ದು, ಈಗ ಅವರನ್ನು ವೀರೋಧಿಸುತ್ತಿರುವದು ಹಾಗೆಯೇ ಜನರು ಕೆಜೆಪಿ ಬಗ್ಗೆ ಭ್ರಮನಿರಶನಗೊಂಡಿರುವದರಿಂದ ಈ ಚುನಾವಣೆ ಜೆಡಿಎಸ್‌ಗೆ ವರವಾಗಲಿದೆ ಎಂದರು.
ಅಭ್ಯರ್ಥಿ ಬಳಿಗಾರ ಸಂಗಡ ಮಾಜಿ ಜೆಡಿಎಸ್ ಅಧ್ಯಕ್ಷ ನಾಗರಾಜ ಗೌಡ,ರಾಜ್ಯ ಜೆಡಿಎಸ್ ಕಾರ್ಯದರ್ಶಿ ಗಜೇಂದ್ರ, ಗಾಜಾಸಾಬ್,ರಶೀದ್, ಬಾಷಾಸಾಬ್ ಹಲವಾರು ಕಾರ್ಯಕರ್ತರು ಜೊತೆಯಲ್ಲಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement