ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಜಾಗೃತಿ ಮೂಡಿಸಿದ ನವೋದಯ ಸಾಹಿತ್ಯ

Lingaraj Badiger
Updated On : 30 Apr 2013, 10:52 am

ಕಪ್ರ ವಾರ್ತೆ, ಶಿವಮೊಗ್ಗ, ಏ.29
ಭಾಷೆಯ ಪ್ರಯೋಗದ ಜೊತೆಗೆ ಆಧುನಿಕ ಸಾಹಿತ್ಯವು ಜೀವನ ಶ್ರದ್ಧೆಯಿರುವ ಆಸಕ್ತಿ ಕೇಂದ್ರವಾಗಿತ್ತು. ಆಧ್ಯಾತ್ಮ ನಿರಾಕರಣೆಯಾಗಿರಲಿಲ್ಲ. ಮನುಷ್ಯ, ಮನುಷ್ಯ ನಡುವಿನ ಸಂಬಂಧ, ನಿಸರ್ಗದ ಸಂಬಂಧ, ಜೀವನ ಮೌಲ್ಯಗಳನ್ನು ಗುರುತಿಸುವ ಕಾಲವಾಗಿತ್ತು ಎಂದು ಉಪನ್ಯಾಸಕ ಡಾ. ನಾಗೇಶ್ ಬಿದರಗೋಡು ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಗರದ ರಾಜೇಂದ್ರನಗರ ಬಡಾವಣೆಗೆ ಸೇರಿದ ಸಹ್ಯಾದ್ರಿ ಪ್ರೌಢಶಾಲೆಯ ಆವರಣದಲ್ಲಿರುವ ಶ್ರೀ ಕಡಿದಾಳು ರಾಮಪ್ಪಗೌಡ ಸಭಾಂಗಣದಲ್ಲಿ ಶ್ರೀಮತಿ ಕಮಲ ಜಿ.ಬಿ. ರುದ್ರಪ್ಪ ದತ್ತಿ ಮತ್ತು ಜಿ.ಆರ್. ಪ್ರವೀಣ್ ಶ್ರೀ ಜಿ. ಬಿ. ರುದ್ರಪ್ಪ ದತ್ತಿ ಅಂಗವಾಗಿ ನವೋದಯ ಸಾಹಿತ್ಯ ಚಿಂತನೆ ಮತ್ತು ಸುಗಮ ಸಂಗೀತ ದತ್ತಿ ಕಾರ್ಯಕ್ರಮದ ಆಶಯದಂತೆ ಅವರು “ÑÚßVÚÈÚß ಸಂಗೀತಕ್ಕೆ ನವೋದಯ ಸಾಹಿತ್ಯ OÚæàsÚßVæ’ ವಿಚಾರವಾಗಿ ಉಪನ್ಯಾಸ ನೀಡಿ, ಸ್ವಾತಂತ್ರ್ಯ ಕಿತ್ತುಕೊಂಡು ಗುಲಾಮಗಿರಿಯ ಬದುಕು ಅನುಭವಿಸಿದ್ದ ಕಾಲದಲ್ಲಿ ನವೋದಯ ಸಾಹಿತ್ಯ ಜನಜಾಗೃತಿ ಮಾಡುವ ಕೆಲಸವನ್ನು ಮಾಡಿತೆಂದರು.
ಅನೇಕ ಪ್ರಯೋಗಗಳು: ಹೊಸಗನ್ನಡ ಸಾಹಿತ್ಯ ಸೃಷ್ಟಿಯಾಗಿದ್ದು ಹೊಸ ಪ್ರಯೋಗಗಳ ಮೂಲಕವೆ. ಸಾಕಷ್ಟು ಪೂರ್ವತಯಾರಿಯ ಮೂಲಕ ಬೇರೆ ಬೇರೆ ಕಾರಣಗಳಿಂದ ಬದಲಾವಣೆಯ ಹಂತ ತಲುಪಿದ ಕಾಲವದು. ಸ್ವೀಕಾರ, ನಿರಾಕಾರದ ಜಾಗೃತಿಯಲ್ಲಿ ನವೋದಯ ಸಾಹಿತ್ಯ ಬೆಳೆದುಬಂದಿದ್ದನ್ನು ಗುರುತಿಸಬಹುದು. ಹೊರಗಿನ ಪ್ರಭಾವವನ್ನು ಜೀರ್ಣಿಸಿಕೊಂಡು, ಆಮದಾದ ಸಾಹಿತ್ಯವನ್ನು ತನ್ನದಾಗಿಸಿಕೊಂಡೂ ತನ್ನತನವನ್ನು ಕಾಯ್ದುಕೊಳ್ಳುವ ಸವಾಲುಗಳನ್ನು ಎದುರಿಸಿತು. ಪ್ರಯೋಗಗಳು ಅನುವಾದ, ಪ್ರಾಸ ಬೇಕು, ಬೇಡ ಎನ್ನುವ ಚರ್ಚೆಯ ನಡುವೆ ಜನರಹತ್ತಿರ ಹೋಗುವಂತ ಅನೇಕ ಪ್ರಯೋಗಗಳು ನಡೆದವು ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಿ. ಮಂಜುನಾಥ, ಪ್ರಾಚೀನ ಸಾಹಿತ್ಯವನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಗಮಕಕಲೆ ಹೇಗೆ ಜನಪ್ರಿಯವಾಗಿತ್ತೋ ಹಾಗೆ ನವೋದಯ ಸಾಹಿತ್ಯವನ್ನು ಜನರ ಬಳಿ ತೆಗೆದುಕೊಂಡು ಹೋಗಿ ಸಾಧಾರಣ ಜನರ ನಾಲಗೆಯಲ್ಲೂ ನಮ್ಮ ಕವಿಗಳು ಬರೆದ ಕವನದ ಸಾಲುಗಳು ನಲಿದಾಡುವಂತೆ ಮಾಡುವಲ್ಲಿ ಸುಗಮ ಸಂಗೀತ ಕಲಾವಿದರ ಪಾತ್ರ ಹಿರಿದಾದುದು ಎಂದರು.
ಶ್ರೀನಿಧಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಟಿ.ಡಿ.ಆರ್. ಶ್ರೀಕಂಠಯ್ಯ, ಕಸಾಪ ಜಿಲ್ಲಾ ಸಂಚಾಲಕ ಆರ್. ರತ್ನಯ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಗಾಯಕರಾದ ಡಾ. ಬಿದರಗೋಡು ನಾಗೇಶ್, ಮಮತ, ಶಾಂತಾ ಶಂಕರ್, ಭೂಪಾಳಂ ವಿಜಯಕುಮಾರ್ ಅವರು ಕನ್ನಡ ಗೀತೆಗಳನ್ನು ಹಾಡಿದರು. ಪ್ರಕಾಶ ಕಮ್ಮಾರ್ ಸ್ವಾಗತಿಸಿದರು. ಎಸ್.ಎಂ. ಲೋಕೇಶ್ ಕಾರ್ಯಕ್ರಮ ನಿರೂಪಿಸಿದರು, ತಾಲೂಕು ಕಾರ್ಯದರ್ಶಿ ಇ. ಜಯಣ್ಣ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement