ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ನಿನ್ನೆ ಒಂಟಿ ಕಾಲು, ಇಂದು ಉರುಳುಸೇವೆ ಪ್ರಚಾರ

Lingaraj Badiger
Updated On : 30 Apr 2013, 11:02 am

ಶಿವಮೊಗ್ಗ: ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಉಷಾ ಜಯರಾಜ್ ಅವರ ಅಭಿಮಾನಿಗಳು ವಿನೂತನ ರೀತಿಯಲ್ಲಿ ಪ್ರಚಾರ ನಡೆಸಿದರು. ನಗರದ ಪ್ರಮುಖ ಸ್ಥಳಗಳಲ್ಲಿ ಒಂಟಿ ಕಾಲಿನಲ್ಲಿ ನಿಂತು ಮತಯಾಚಿಸಿದರಲ್ಲದೇ ಮೆರವಣಿಗೆ ನಡೆಸಿ ಪ್ರಚಾರ ಕಾರ್ಯಕೈಗೊಂಡರು. ಕೋಟೆ ರಸ್ತೆಯಲ್ಲಿರುವ ಭೀಮೇಶ್ವರ ದೇವಾಲಯದಲ್ಲಿ ಬೆಳಗ್ಗೆ ಒಂಟಿಕಾಲಿನಲ್ಲಿ ಪೂಜೆ, ಬೆಕ್ಕಿನ ಕಲ್ಮಠ ಎದುರು ಒಂಟಿ ಕಾಲಿನಲ್ಲಿ ನಿಂತು ಮತಯಾಚನೆ, ನಂತರ ಮೀನಾಕ್ಷಿ ಭವನ, ಕೃಷ್ಣ ಕೆಫೆ, ಗಾಂಧಿಬಜಾರ್, ಬಸ್ ನಿಲ್ದಾಣದಲ್ಲಿ ಒಂಟಿ ಕಾಲಿನಲ್ಲಿ ನಿಂತು ಮತಯಾಚನೆ ಮಾಡಿದರು.
ಉರುಳು ಸೇವೆಗೆ ಆಹ್ವಾನ: ಉಷಾ ಜಯರಾಜ್ ಗೆಲವಿಗಾಗಿ ಪ್ರಾರ್ಥಿಸಿ ಅವರ ಅಭಿಮಾನಿಗಳು ಏ.30ರಂದು ಉರುಳು ಸೇವೆ ಮತ್ತು ಮಹಿಳೆಯರಿಂದ ಮಡಕೆ ಪ್ರದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಬೆಳಗ್ಗೆ 9.30ಕ್ಕೆ ಕಾಶಿಪುರ ಅಂತರಘಟ್ಟಮ್ಮ ದೇವಾಲಯದಲ್ಲಿ ಉರುಳು ಸೇವೆ ನಡೆಯಲಿದೆ. ವಿನೋಬ ನಗರ ಪೊಲೀಸ್ ಚೌಕಿ ಮತ್ತು ಲಕ್ಷ್ಮೀ ಟಾಕೀಸ್ ಬಳಿ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಅನೀತಿ, ದುರಾಡಳಿತವನ್ನು ಸಾರುವ ಮಡಿಕೆಗಳ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ನಂತರ ದುರ್ಗಿಗುಡಿಯ ಮಾರಿಗದ್ದುಗೆ ದೇವಾಲಯದಲ್ಲಿ ಉರುಳುಸೇವೆ ನಡೆಯಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement