ಮೇ 3ರಿಂದ ಧಾರ್ಮಿಕ ಶಿಬಿರ
ಶಿವಮೊಗ್ಗ: ಮಂತ್ರಾಲಯದ ಶ್ರೀ ಗುರುಸಾರ್ವಭೌಮ ಸಂಸ್ಕೃತ ವಿದ್ಯಾಪೀಠದಿಂದ ಮೇ 3ರಿಂದ 12ರವರೆಗೆ ಹತ್ತು ದಿನಗಳ ಕಾಲ ಹಾವೇರಿ ಜಿಲ್ಲೆಯಲ್ಲಿರುವ ಹೊಸರಿತ್ತಿಯಲ್ಲಿರುವ ಧೀರೇಂದ್ರ ಗುರುಕುಲದಲ್ಲಿ ಉಪನೀತರಾದ ಬ್ರಾಹ್ಮಣರಿಗೆ ಧಾರ್ಮಿಕ ಶಿಬಿರ ಹಮ್ಮಿಕೊಳ್ಳಲಾಗಿದೆ.
ನಿತ್ಯನೈಮಿತ್ತಿಕ ಕರ್ಮಗಳಾದ ಪೂಜಾವಿಧಾನ, ಸೂಕ್ತಗಳು, ಸ್ತೋತ್ರಗಳು, ವೈಶ್ವದೇವ, ಬಲಿಹರಣ, ಸಾಮಾನ್ಯ ಧರ್ಮಶಾಸ್ತ್ರ ಮಾಹಿತಿ ಇತ್ಯಾದಿಗಳನ್ನು ಶಿಬಿರದಲ್ಲಿ ಕಲಿಸಿಕೊಡಲಾಗುವುದು. ಭಾಗವಹಿಸುವವರಿಗೆ ಊಟ ತಿಂಡಿ ವಸತಿ ವಸತಿ ಉಚಿತವಾಗಿ ಕಲ್ಪಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಅಶೋಕ್, ವ್ಯವಸ್ಥಾಪಕರು, ಧೀರೇಂದ್ರ ಗುರುಕುಲ, ಹೊಸರಿತ್ತಿ ದೂರವಾಣಿ 08375287751ಯವರನ್ನು ಸಂಪರ್ಕಿಸುವಂತೆ ಮಂತ್ರಾಲಯದ ಶ್ರೀ ಗುರುಸಾರ್ವಭೌಮ ಸಂಸ್ಕೃತ ವಿದ್ಯಾಪೀಠದ ಪ್ರಾಂಶುಪಾಲ ಎನ್.ವಾದಿರಾಜಾಚಾರ್ ಕೋರಿದ್ದಾರೆ.