ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಸೊರಬದಲ್ಲಿ ಚುರುಕಿನ ಪ್ರಚಾರ

Lingaraj Badiger
Updated On : 30 Apr 2013, 11:03 am

ಕ.ಪ್ರ.ವಾರ್ತೆ, ಸೊರಬ, ಏ.29
ತಾಲೂಕಿನಲ್ಲಿ ವಿವಿಧ ಪಕ್ಷಗಳ ಚುನಾವಣಾ ಪ್ರಚಾರ ಕಾರ್ಯ ಬಿರುಸುಗೊಂಡಿದೆ.
ಪಕ್ಷೇತರ ಅಭ್ಯರ್ಥಿಗಳು ಸೇರಿದಂತೆ ವಿವಿಧ ಪಕ್ಷದವರು ಗ್ರಾಮೀಣ ಪ್ರದೇಶಗಳಲ್ಲಿ ತೆರಳಿ ತರಾತುರಿ ಪ್ರಚಾರ ನಡೆಸುತ್ತಿದ್ದಾರೆ.
ಹಿಂದಿನ ಚುನಾವಣೆಯಲ್ಲಿ ಕಂಡ ಹಲವು ಅರ್ಭಟಗಳಿಲ್ಲದಿರುವುದರಿಂದ ಜನ ಜಮಾಯಿಸುವಿಕೆಯಲ್ಲಿ ತುಸು ಹಿನ್ನಡೆ ಅನುಭವಿಸುವಂತಾಗಿದೆ. ಬ್ಯಾನರ್. ಫ್ಲೆಕ್ಸ್, ಬಂಟಿಂಗ್ಸ್ ಇತ್ಯಾದಿ ಇಲ್ಲದಿರುವುದರಿಂದ ಸಾರ್ವಜನಿಕ, ಸರ್ಕಾರಿ ಕಟ್ಟಡ, ಬಾವಿಕಟ್ಟೆ, ಮೋರಿ, ಮಾರ್ಗದರ್ಶಿ ಫಲಕ, ಕಾಂಪೌಂಡ್ ಅಂದಗೆಡದೆ ಉಳಿದಿರುವುದು ಸಮಾಧಾನಕರ ಸಂಗತಿ ಆಗಿದೆ.
ಸಮಯದ ಮಿತಿ ಇರುವುದರಿಂದ ಅಭ್ಯರ್ಥಿ ಹೊರತು ಪಡಿಸಿ ಉಳಿದವರಿಗೆ ವೇದಿಕೆ ಅವಕಾಶ ಇಲ್ಲದಂತಾಗಿದೆ. ಇಂದು ಒಂದು ಪಕ್ಷದಲ್ಲಿ ಕಂಡವರು ನಾಳೆ ಇನ್ನೊಂದು ಪಕ್ಷದಲ್ಲಿ ಗುರುತಿಸಿಕೊಳ್ಳುತ್ತಿರುವುದು ಗ್ರಾಮಾಂತರ ಪ್ರದೇಶಗಳಲ್ಲಿ ಗಮನಾರ್ಹವಾಗಿದೆ. ಹಿಂದೆ ಕಾಂಗ್ರೆಸ್‌ನಿಂದ ಆಯ್ಕೆಗೊಂಡು ಪಪಂ ಅಧ್ಯಕ್ಷರಾಗಿದ್ದ ವಿಜಯಾ ಮಹಾಲಿಂಗಪ್ಪ, ಇತ್ತೀಚೆಗೆ ನಡೆದ ಪಪಂ ಚುನಾವಣೆಯಲ್ಲಿ 9 ನೇ ವಾರ್ಡಿನಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಸುನಂದಮ್ಮ ತಮ್ಮ ಅಪಾರ ಬೆಂಬಲಿಗರೊಂದಿಗೆ ಜೆಡಿಎಸ್ ಸೇರಿದ್ದಾರೆ.
ಬಿಎಸ್‌ಆರ್ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಬಾಸೂರು ಚಂದ್ರೇಗೌಡ ಚುನಾವಣಾ ಕಣದಿಂದ ತಟಸ್ಥರಾಗಿದ್ದು, ಬಿಜೆಪಿಯೊಂದಿಗೆ ಕೈಜೋಡಿಸಿದ್ದಾರೆ. ಇತ್ತ ಜೆಡಿಎಸ್‌ನಲ್ಲಿ ಹಿಂದೆ ಗುರುತಿಸಿಕೊಂಡಿದ್ದ ಜಡೆ ಭಾಗದ ವಿಜಯಕುಮಾರ್ ಮತ್ತು ಅಶೋಕ್ ಪಾಟೀಲ್ ಬೆಂಬಲಿಗರೊಂದಿಗೆ ಪಕ್ಷ ತ್ಯಜಿಸಿ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ. ಇದೇ ಪಕ್ಷದಲ್ಲಿದ್ದ ವಸಂತ ಬಂಗೇರಾ, ಗುಡ್ಡಪ್ಪ ಬಿಜೆಪಿಯತ್ತ ಮುಖಮಾಡಿದ್ದಾರೆ. ಬಿಜೆಪಿ ಅಭ್ಯರ್ಥಿ ಸಂಬಂಧಿ ಕುಡಿಗೆರೆ ಬಂಗಾರಪ್ಪಗೌಡ ಕೆಜೆಪಿಗೆ ಸೇರ್ಪಡೆಗೊಂಡಿದ್ದಾರೆ.

ಪಕ್ಷೇತರ ಅಭ್ಯರ್ಥಿ ಸಂಗಮೇಶ್ವರ ಪರ ಪ್ರಚಾರ
ಭದ್ರಾವತಿ: ಅಖಿಲ ಭಾರತ ಅಣ್ಣಾ ಡಿಎಂಕೆ ಪಕ್ಷದ ಭದ್ರಾವತಿ ಘಟಕವು ಪಕ್ಷೇತರ ಅಭ್ಯರ್ಥಿ ಬಿ.ಕೆ. ಸಂಗಮೇಶ್ವರ ಅವರಿಗೆ ಸಂಪೂರ್ಣವಾಗಿ ಬೆಂಬಲವನ್ನು ವ್ಯಕ್ತಪಡಿಸಿದ್ದು, ಅವರ ಪರವಾಗಿ ಪ್ರಚಾರ ನಡೆಸಿತು.
ಇದನ್ನು ಹೊರತು ಪಡಿಸಿ ಪಕ್ಷದ ಹೆಸರಿನಲ್ಲಿ ಬೇರೆ ಯಾರಿಗಾದರೂ ಬೆಂಬಲ ವ್ಯಕ್ತಪಡಿಸುವುದಾಗಿ ಹೇಳಿಕೆ ನೀಡಿದಲ್ಲಿ ಅದು ಸತ್ಯಕ್ಕೆ ದೂರವಾದ ಸಂಗತಿಯಾಗಿರುತ್ತದೆಂದು ಸ್ಪಷ್ಟೀಕರಿಸುವುದಾಗಿ ಎಐಎಡಿಎಂಕೆ ಭದ್ರಾವತಿ ತಾಲೂಕು ಘಟಕದ ಕಾರ್ಯದರ್ಶಿ ವೇಲಾಯುಧನ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement