ತರಬೇತಿ ಶಿಬಿರ
ಶಿವಮೊಗ್ಗ: ರವೀಂದ್ರನಗರದ ಐಪಿಎ ಸೆಂಟರ್ನಲ್ಲಿ ಮೇ 8 ರಂದು ಮಕ್ಕಳು ಮತ್ತು ಮಹಿಳೆಯರಿಗೆ ಚಿತ್ರಕಲೆ, ಕ್ರಾಫ್ಟ್ ತರಬೇತಿ ಶಿಬಿರ ಏರ್ಪಡಿಸಿದೆ. 8 ರಿಂದ 50 ವರ್ಷದೊಳಗಿನವರು ತರಬೇತಿಯಲ್ಲಿ ಪಾಲ್ಗೊಳ್ಳಬಹುದು. ಆಸಕ್ತರು ಮೇ 7ರೊಳಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವಂತೆ ಸೆಂಟರ್ ತಿಳಿಸಿದೆ. ವಿವರಗಳಿಗಾಗಿ- 8050409114.
ಚೆಸ್ ತರಬೇತಿ
ಶಿವಮೊಗ್ಗ: ಯಾದವ ಸ್ಕೂಲ್ ಆಫ್ ಚೆಸ್ ಮೇ 1ರಿಂದ 10ರವರೆಗೆ 2ನೇ ಬೇಸಿಗೆ ಚೆಸ್ ತರಬೇತಿ ಶಿಬಿರ ಆಯೋಜಿಸಿದೆ. ನಗರದ ಕೋಟೆ ವಿದ್ಯಾಜ್ಯೋತಿ ಶಾಲೆ ಹಾಗೂ ರಾಜೇಂದ್ರ ನಗರದ ಯಾದವ ನಿಲಯದಲ್ಲಿ ತರಬೇತಿ ನೀಡಲಾಗುವುದು. ಪ್ರತಿ ತರಗತಿಯಲ್ಲಿ 8 ವರ್ಷ ಮೇಲ್ಪಟ್ಟ 20 ಮಕ್ಕಳಿಗೆ ಮಾತ್ರ ಅವಕಾಶವಿದ್ದು, 8 ವರ್ಷದೊಳಗಿನ ಮಕ್ಕಳು ಕಡ್ಡಾಯವಾಗಿ ತಮ್ಮ ಪೋಷಕರೊಂದಿಗೆ ಭಾಗವಹಿಸಬಹುದು ಎಂದು ಸ್ಕೂಲ್ ಅಧ್ಯಕ್ಷ ಟಿ.ಎಂ. ಅಶೋಕ ಯಾದವ ತಿಳಿಸಿದ್ದಾರೆ. ವಿವರಗಳಿಗಾಗಿ- 9242401702.