ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಬಿಎಸ್ಪಿ ಬಂಡಾಯ ಅಭ್ಯರ್ಥಿ ರೋಡ್ ಶೋ

Vishwanath S
Updated On : 1 May 2013, 12:49 pm

ಸೊರಬ: ತಾಲೂಕಿನಲ್ಲಿ ಹಿಂದೆ ಆಡಳಿತ ನಡೆಸಿದ ಯಾವೊಬ್ಬ ಜನಪ್ರತಿನಿಧಿಯೂ ಅಭಿವೃದ್ಧಿಗಾಗಿ ಶ್ರಮಿಸಿಲ್ಲ ಎಂದು ಬಿಎಸ್ಪಿ ಬಂಡಾಯ ಅಭ್ಯರ್ಥಿ ಗುಡವಿ ಬಸವಣ್ಯಪ್ಪ ಆರೋಪಿಸಿದರು.
 ಗ್ರಾಮಾಂತರ ಪ್ರದೇಶದಲ್ಲಿ ಪ್ರಚಾರ ಕೈಗೊಂಡಿರುವ ಅವರು, ಗುಡವಿ ಗ್ರಾಮದಲ್ಲಿ ರೋಡ್ ಶೋ ನಡೆಸಿ ಮಾತನಾಡಿ, ಜನಪ್ರತಿನಿಧಿಗಳ ನಿಷ್ಕಾಳಜಿಯಿಂದಾಗಿ ಇಂದು ತಾಲೂಕಿನ ಎಲ್ಲ 39 ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಸಮರ್ಪಕ ಕುಡಿಯುವ ನೀರಿನ ಸೌಲಭ್ಯವಿಲ್ಲ. ವಿದ್ಯುತ್ ವ್ಯವಸ್ಥೆ, ರಸ್ತೆ, ಚರಂಡಿಗಳಿಲ್ಲ. ಎಂದು ದೂರಿದರು.
 ರೋಡ್ ಶೋನಲ್ಲಿ ಅಬ್ದುಲ್ ಘನಿ, ತುಕಾರಾಂ ನಡಹಳ್ಳಿ, ಮಂಜು, ಆನವಟ್ಟಿ ಶಾರದಮ್ಮ, ಕಲ್ಪನಾ ಮೂಡಿ, ಓಂದೇವ್, ಉಮೇಶ್ ಗುಡವಿ, ಚಂದ್ರಪ್ಪ, ಬಸವರಾಜ್ ಜಂಗಿನಕೊಪ್ಪ, ಅಂಡಿಗೆ ಶಾರದಮ್ಮ, ಮಂಜುಳಮ್ಮ, ನಜೀರ್ ಅಹ್ಮದ್, ಸುರೇಶ್ ಜೇಡಗೆರೆ ಮತ್ತಿತರರು ಈ ಸಂದರ್ಭದಲ್ಲಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement