ಉತ್ತಮ ಆರೋಗ್ಯಕ್ಕೆ ಹಾಲು
ಸೊರಬ: ಪ್ರಸಕ್ತ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಕ್ಷೀರಭಾಗ್ಯ ಯೋಜನೆಗೆ ತಾಲೂಕಿನಾದ್ಯಂತ ಎಲ್ಲ ಕಿರಿಯ, ಮಾಧ್ಯಮಿಕ, ಪ್ರೌಢಶಾಲೆಗಳಲ್ಲಿ ಗುರುವಾರ ಚಾಲನೆ ನೀಡಿ ಮಕ್ಕಳಿಗೆ ಹಾಲು ವಿತರಿಸಲಾಯಿತು.
ಪಟ್ಟಣದ ಲೋಕೋಪಯೋಗಿ ಕಾಲೋನಿಯ ಸಹಿಪ್ರಾ ಶಾಲೆಯಲ್ಲಿ ಜಿಪಂ ಸದಸ್ಯ ಗುರುಕುಮಾರ್ ಪಾಟೀಲ್ ಚಾಲನೆ ನೀಡಿದರು.
ಪ.ಪಂ. ಸದಸ್ಯ ಮಂಚಿ ಹನುಮಂತಪ್ಪ ಶಾಲಾ ಸಮಿತಿಯ ಅಧ್ಯಕ್ಷ ಎಂ. ಬಸವರಾಜಪ್ಪ, ಶಿವಮೊಗ್ಗ ಡಯಟ್ನ ಉಪನ್ಯಾಸಕ ನಾಗೇಂದ್ರಪ್ಪ, ಸಮನ್ವಯಾಧಿಕಾರಿ ಪರಶುರಾಮಪ್ಪ,ಬಿಆರ್ಸಿಯ ಸದಾನಂದಗೌಡ, ರಾಜಾನಾಯ್ಕ್, ಮುಖ್ಯಶಿಕ್ಷಕ ಕೃಷ್ಣಾನಂದ್ ಶಾಲಾ ಸದಸ್ಯರು ಇದ್ದರು.
ಪಟ್ಟಣದ ರಂಗನಾಥ ಶಾಲೆಯಲ್ಲಿ ಪ.ಪಂ. ಸದಸ್ಯ ಪ್ರಶಾಂತ್ ಮೇಸ್ತ್ರಿ ಚಾಲನೆ ನೀಡಿದರು.
ಮುಖ್ಯ ಶಿಕ್ಷಕ ವಿ.ಸಿ. ಮಠದ್, ದೈಹಿಕ ಶಿಕ್ಷಣ ಪರಿವೀಕ್ಷಕ ಎಸ್.ಎಸ್. ಬಣಕಾರ್, ಶಿಕ್ಷಕ, ಮಾಲತೇಶ್, ರಂಗನಾಥ್ ಮೊದಲಾದವರು ಇದ್ದರು.
ಪಟ್ಟಣದ ಪದವಿಪೂರ್ವ ಕಾಲೇಜಿನಲ್ಲಿ ಕೊಡಕಣಿ ಗ್ರಾಪಂ ಅಧ್ಯಕ್ಷ ಹೂವಪ್ಪನಾಯ್ಕ್ ಚಾಲನೆ ನೀಡಿದರು. ಗ್ರಾಪಂ ಸದಸ್ಯ ಕೆ.ಎಂ. ಚಿನ್ನಪ್ಪ, ಉಪ ಪ್ರಾಂಶುಪಾಲ ಬಸವರಾಜ್ ಜಡ್ಡಳ್ಳಿ, ಹಾಲಪ್ಪ, ರಾಮಚಂದ್ರ, ಶಿವಮೂರ್ತಿ ಮೊದಲಾದವರು ಇದ್ದರು.