ಗ್ರಾಮೀಣ ಬಸ್ಸು ಸಂಚಾರ ಆರಂಭ
ಶಿಕಾರಿಪುರ: ತಾಲೂಕಿನ ಗ್ರಾಮೀಣ ಜನತೆಯ ಬಹು ದಿನದ ಬೇಡಿಕೆಯಾಗಿದ್ದ ಸರ್ಕಾರಿ ಗ್ರಾಮೀಣ ಬಸ್ಸು ಸಂಚಾರಕ್ಕೆ ಗುರುವಾರ ಹಸಿರು ನಿಶಾನೆ ದೊರೆತಿದೆ. ತಾಲೂಕಿನ ಬೆಂಡೆಕಟ್ಟೆ, ಬೇಗೂರು, ಡಿ.ಬಿ ಹಳ್ಳಿ, ಬಗನಕಟ್ಟೆ, ಸಂಕ್ಲಾಪುರ, ಕಿಟ್ಟದಹಳ್ಳಿ ಮೂಲಕ ಮಾಸೂರು ತಲಪುವ ಬಸ್ಸು ಪಟ್ಟಣದ ಆರಾಧ್ಯ ದೈವ ಶ್ರೀ ಹುಚ್ಚೂರಾಯಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಸಂಚಾರವನ್ನು ಆರಂಭಿಸಲಾಯಿತು.
ಗ್ರಾಮೀಣ ಸಂಚಾರದ ನೂತನ ಬಸ್ಸಿಗೆ ಚಾಲನೆ ನೀಡಿ ಮಾತನಾಡಿದ ತಾ.ಪಂ ಅಧ್ಯಕ್ಷ ಹನುಮಂತಪ್ಪ, ಹಲವು ವರ್ಷಗಳ ಈ ಬಾಗದ ಜನತೆಯ ಕನಸು ಇದೀಗ ನನಸಾಗಿದ್ದು ಮಕ್ಕಳ ಸಹಿತ ಎಲ್ಲಾ ವರ್ಗದ ಜನತೆಯು ನಿತ್ಯ ಪಟ್ಟಣಕ್ಕೆ ಸಂಚರಿಸಲು ಅತ್ಯುಪಯುಕ್ತವಾಗಿದೆ ಎಂದು ಹರ್ಷಿಸಿದರು.
ಈ ಸಂದರ್ಭದಲ್ಲಿ ಜಿ.ಪಂ ಸದಸ್ಯೆ ಶಾಂತಮ್ಮ, ತಾ.ಪಂ ಸದಸ್ಯೆ ಲೀಲಾವತಿ ಲಕ್ಷ್ಮಣ್, ಜಿಲ್ಲಾ ಸಾರಿಗೆ ಉಪಆಯುಕ್ತ ಕುಬೇರಪ್ಪ, ದಾವಣಗೆರೆ ವಿಭಾಗ ನಿಯಂತ್ರಣಾಧಿಕಾರಿ ಪಾರ್ಥಸಾರಥಿ, ಸಾಗರ ಘಟಕ ವ್ಯವಸ್ಥಾಪಕ ರಮೇಶ್ ಕುಮಾರ್, ಬೇಗೂರು ಮಂಜಪ್ಪ, ಪಕೀರಪ್ಪ, ಲೋಕೇಶಪ್ಪ, ಹನುಮಂತಪ್ಪ ಮತ್ತಿತರರು ಹಾಜರಿದ್ದರು.