ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ನೂರಾರು ಎಕರೆ ಕೃಷಿ ಭೂಮಿ ಜಲಾವೃತ

Rashmi Kasaragodu
Updated On : 2 Aug 2013, 11:10 am

ಶಿರಾಳಕೊಪ್ಪ: ಹಲವಾರು ವರ್ಷಗಳಿಂದ ಕಂಡರಿಯದ ಭಾರಿ ಮಳೆಯಿಂದ ಶಿರಾಳಕೊಪ್ಪ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಕೆರೆ ಮತ್ತು ಕೆರೆಕೋಡಿಗಳು ಒಡೆದು ನೂರಾರು ಎಕರೆ ಕೃಷಿ ಭೂಮಿ ಜಲಾವೃತ ವಾಗಿದ್ದು, ರೈತರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.
 ಶಿರಾಳಕೊಪ್ಪ ಪಟ್ಟಣದ ಹೊರವಲಯದ ಕೊರಲಘಟ್ಟ ಹಳ್ಳದ ಕೋಡಿನೀರು ಭಾರಿಪ್ರಮಾಣದಲ್ಲಿ ಹೋಗುತ್ತಿರುವದರಿಂದ ಕೆರೆ ಕೆಳಗೆ ಇರುವ ಶಿವಣ್ಣ ಎಂಬುವವರ ಅಡಿಕೆ ತೋಟ ಹಾಗು ಕೃಷಿ ಭೂಮಿ ಜಲಾವೃತ ವಾಗಿವೆ.
 ಕುಸಗೂರು ಗ್ರಾಮದಲ್ಲಿ ಕೆರೆ ಒಡೆದು ಹೋಗಿದೆ, ಹಾಗೆಯೇ ಮತ್ತಿಗಟ್ಟೆ ಕೆರೆ ಕೋಡಿ, ಬೆಂಡಿಗಟ್ಟೆ ಕೆರೆಕೋಡಿಗಳು ಒಡೆದು ಕನಿಷ್ಠ 200ಎಕರೆ ಕೃಷಿ ಭೂಮಿ ಜಲಾವೃತವಾಗಿದೆ.
 ಕುಸ್ಕೂರು-ಭೋಗಿ ಗ್ರಾಮಕ್ಕೆ ಹೋಗುವ ಇತ್ತಿಚೆಗೆ ರಿಪೇರಿ ಮಾಡಲಾದ 3ಕಿಮೀ ರಸ್ತೆ ಹಾಗು ಎರಡು ಮೋರಿಗಳು ಕಿತ್ತುಹೋಗಿವೆ. ಶಿರಾಳಕೊಪ್ಪ ಪಟ್ಟಣದಲ್ಲಿ ಹಾಗು ಹತ್ತಿರದ ಗ್ರಾಮದಲ್ಲಿ ಅತಿಯಾದ ಮಳೆಗೆ ಎರಡು ಮನೆಗಳ ಗೋಡೆಗಳು ಕುಸಿದಿದ್ದಾಗಿ ಉಪ ತಹಶೀಲ್ದಾರ ಆನಂದ ಗರಡಿ ತಿಳಿಸಿದ್ದಾರೆ.
 ಶಿರಾಳಕೊಪ್ಪ ಪಟ್ಟಣದ ಸರ್ಕಾರಿ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇದ್ದಂತಹ ತೆಂಗಿನ ಮರಮೊಂದು ಶಾಲೆಯಮೇಲೆ ಬಿದ್ದು ಹಲವಾರು ಹಂಚು ಒಡೆದು ಗೋಡೆಗೆ ಹಾನಿ ಆಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement