ಮಕ್ಕಳ ದಾಖಲಾತಿ ಹೆಚ್ಚಿಸಿ
ಶಿಕಾರಿಪುರ: ಭವಿಷ್ಯದ ಪ್ರಜೆಗಳಾದ ಮಕ್ಕಳನ್ನು ಕೇವಲ ವಿದ್ಯಾವಂತರನ್ನಾಗಿಸದೆ ಆರೋಗ್ಯವಂತರನ್ನಾಗಿಸಲು ಸರ್ಕಾರ ಕ್ಷೀರ ಭಾಗ್ಯ ಯೋಜನೆಯನ್ನು ರಾಜ್ಯಾದ್ಯಂತ ಜಾರಿಗೊಳಿಸಿದ್ದು, ಯೋಜನೆಯ ಸದುಪಯೋಗದ ಮೂಲಕ ಶಿಕ್ಷಕರು ಮಕ್ಕಳ ದಾಖಲಾತಿ ಹೆಚ್ಚಿಸಿ ಅನಕ್ಷರತೆಯನ್ನು ಸಂಪೂರ್ಣ ತೊಡೆದುಹಾಕಲು ಪಣ ತೊಡಬೇಕಾಗಿದೆ ಎಂದು ಪುರಸಭಾ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಕೆ.ಜಿ ವಸಂತಗೌಡ ತಿಳಿಸಿದರು.
ಗುರುವಾರ ಪಟ್ಟಣದ ರಥಬೀದಿಯಲ್ಲಿನ ಸರ್ಕಾರಿ ಮಾದರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಜ್ಯ ಸರ್ಕಾರದ ಕ್ಷೀರ ಭಾಗ್ಯ ಯೋಜನೆಯನ್ವಯ ಮಕ್ಕಳಿಗೆ ಹಾಲು ವಿತರಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಮುಖಂಡ ಅನ್ವರ್ ಸಾಬ್, ಶ್ರೀಪತಿಭಟ್, ಪ್ರಕಾಶ ಜಿನ್ನು,
ಶಾಲಾಭಿವೃದ್ದಿ ಸಮಿತಿಯ ಗಣೇಶರಾವ್, ಸಾಹಿದಾಬಾನು, ಮುಖ್ಯ ಶಿಕ್ಷಕ ಚಂದ್ರಪ್ಪ, ರಾಜೇಶ್ವರಿ, ಪ್ರೇಮಲೀಲಾ, ವತ್ಸಲಾ, ಕನ್ನಮ್ಮ ಮತ್ತಿತರರು ಹಾಜರಿದ್ದರು.