ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

'ಅಡಕೆ ಬೆಳೆಗಾರರಿಗೆ ಅನುಕೂಲ ಕಲ್ಪಿಸಿ'

Rashmi Kasaragodu
Updated On : 3 Aug 2013, 11:24 am

ಸಾಗರ: ರಾಜ್ಯ ಸರ್ಕಾರ ಅಡಕೆ ಪುನಶ್ಚೇತನ ಯೋಜನೆಯಡಿ ಬೆಳೆಗಾರರಿಗೆ ಅನುಕೂಲ ಕಲ್ಪಿಸಲು ತೋಟಗಾರಿಕೆ ಇಲಾಖೆ ಮೂಲಕ ಜಾರಿಗೆ ತಂದಿರುವ ಯೋಜನೆ ಸೂಕ್ತ ಮಾಹಿತಿ ಇಲ್ಲದೆ ಬೆಳೆಗಾರರಿಗೆ ತಲುಪಿಲ್ಲ ಎಂದು ಮಾಜಿ ಸಚಿವ ಹರತಾಳು ಹಾಲಪ್ಪ ದೂರಿದರು.
ಬುಧವಾರ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಡಕೆ ತೋಟಕ್ಕೆ ಬಂದಿರುವ ಹಿಡಿಮುಂಡಿಗೆ ರೋಗ, ಬೇರುಹುಳ ರೋಗ ಹಾಗೂ ಹಳದಿ ಎಲೆ ರೋಗಕ್ಕೆ ಅಡಕೆ ಪುನಶ್ಚೇತನ ಯೋಜನೆಯಡಿ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಯೋಜನೆ ಜಾರಿಗೆ ತರಲಾಗಿದೆ. ಆದರೆ ತೋಟಗಾರಿಕೆ ಇಲಾಖೆ ಯೋಜನೆ ಕುರಿತು ಸಮಗ್ರ ಮಾಹಿತಿಯನ್ನು ಬೆಳೆಗಾರರಿಗೆ ತಲುಪಿಸುವಲ್ಲಿ ವಿಫಲವಾಗಿದೆ ಎಂದರು.
ರು. 3,000 ಪರಿಹಾರ: ಯೋಜನೆಯಡಿ ರೋಗಪೀಡಿತ ತೋಟಗಳಿಗೆ ಪ್ರತಿ ಎಕರೆಗೆ ತಲಾ ರು. 3,000 ಪರಿಹಾರ ಕಲ್ಪಿಸಲಾಗುತ್ತದೆ. ಆದರೆ ಈ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸುವ ದಿನ ಜು. 29ಕ್ಕೆ ಕೊನೆಗೊಂಡಿದೆ.  ಗ್ರಾಮಾಂತರ ಪ್ರದೇಶದಲ್ಲಿ ಯೋಜನೆ ಕುರಿತು ಬೆಳೆಗಾರರಿಗೆ ಮಾಹಿತಿ ಇಲ್ಲದೆ ಇರುವುದರಿಂದ ಅರ್ಜಿ  ಸಲ್ಲಿಕೆಯನ್ನು ಇನ್ನು 15 ದಿನ ವಿಸ್ತರಿಸಬೇಕು. ಜೊತೆಗೆ ಪ್ರತಿ ಗ್ರಾಮದಲ್ಲೂ ಯೋಜನೆ ಕುರಿತು ಕರಪತ್ರದ ಮೂಲಕ ಮಾಹಿತಿ ನೀಡಬೇಕು ಎಂದು ಆಗ್ರಹಿಸಿದರು.
ಸಾಗರ, ಹೊಸನಗರ, ತೀರ್ಥಹಳ್ಳಿ ಹಾಗೂ ಸೊರಬ ತಾಲೂಕುಗಳಲ್ಲಿ ಅಡಕೆ ತೋಟಗಳಿಗೆ ವ್ಯಾಪಕ ಕೊಳೆರೋಗ ಬಂದಿದ್ದು, ಪ್ರತಿತೋಟದಲ್ಲಿ ಕ್ವಿಂಟಲ್ ಗಟ್ಟಲೆ ಅಡಕೆ ಉದುರುತ್ತಿದೆ. ಸಾಲ ಮಾಡಿ ಫಸಲು ತೆಗೆದಿದ್ದ ಬೆಳೆಗಾರರು ವ್ಯಾಪಕವಾಗಿ ಅಡಕೆ ಉದುರುತ್ತಿರುವುದರಿಂದ ಆತಂಕಗೊಂಡಿದ್ದಾರೆ ಎಂದರು.
ನೆರವಿಗೆ ಧಾವಿಸಿ: ಈಗಾಗಲೇ ಎರಡು ಮೂರು ಬಾರಿ ಕೊಳೆ ಔಷಧಿ ಸಿಂಪಡಿಸಿದರೂ, ಯಾವುದೆ ಪ್ರಯೋಜನವಾಗಿಲ್ಲ. ರಾಜ್ಯ ಸರ್ಕಾರ ತಕ್ಷಣ ಬೆಳೆಗಾರರ ನೆರವಿಗೆ ಧಾವಿಸಬೇಕು. ಮಲೆನಾಡು ಭಾಗದ ಅಡಕೆ ಬೆಳೆಗಾರರ ಸಮಸ್ಯೆ ನಿವಾರಣೆಗೆ ಪೂರಕವಾಗಿ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಒತ್ತಾಯಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement