ಕ್ಷೀರಭಾಗ್ಯಕ್ಕೆ ಚಾಲನೆ
ಶಿರಾಳಕೊಪ್ಪ: ಅಕ್ಷರ ದಾಸೋಹದಂತೆ ಸರ್ಕಾರದ ಮಹತ್ತರ ಕ್ಷೀರಧಾರೆ ಯೋಜನೆಯಿಂದ ಮಕ್ಕಳು ಆರೋಗ್ಯ ಹೊಂದಿಪಟ್ಟಣಕ್ಕೆ ಹಾಗು ನಾಡಿಗೆ ಒಳ್ಳೆಯ ಕೊಡಿಗೆ ಕೊಡುವಂತಾಗಲಿ ಎಂದು ಶಿರಾಳಕೊಪ್ಪ ಪಪಂ ಮುಖ್ಯಾಧಿಕಾರಿ ರಾಜ್ಕುಮಾರ್ ಕರೆ ನೀಡಿದರು. ಶಿರಾಳಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಗಂಡು ಮಕ್ಕಳ ಶಾಲೆಯಲ್ಲಿ ಗುರುವಾರ ಪ್ರಾರಂಭವಾದ ಕ್ಷೀರಧಾರೆ ಯೋಜನೆ ಮತ್ತು ಪಪಂ ನಿಂದ ಮಕ್ಕಳಿಗೆ ಕೊಡಲ್ಪಟ್ಟ ತಟ್ಟೆ ಲೋಟ ವಿತರಣ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಶಿರಾಳಕೊಪ್ಪ ಕ್ಲಸ್ಟರ್ ಅಧಿಕಾರಿ ನಾಗೇಂದ್ರಪ್ಪ ರಾಗೇರ್ ಮಾತನಾಡಿದರು. ಪಪಂ ಸದಸ್ಯ ಸಮಿಉಲ್ಲಾ ತಟ್ಟೆ ಲೋಟವನ್ನು ಹಾಗು ಪಪಂ ಸದಸ್ಯ ಜಾಫರ್ ಹಾಲನ್ನು ವಿತರಿಸಿದರು.