ತಯಾರಿಕಾ ತರಬೇತಿ
ಶಿವಮೊಗ್ಗ: ಶ್ರೀ ಇನ್ಸ್ಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ ನಿರುದ್ಯೋಗಿಗಳಿಗೆ ವಿವಿಧ ವಸ್ತುಗಳ ತಯಾರಿಕಾ ತರಬೇತಿ ನೀಡಲು ನಿರ್ಧರಿಸಿದೆ. ಕ್ಯಾಂಡಲ್ಸ್, ಕರ್ಪೂರ, ಸಾಂಬ್ರಾಣಿ ದೂಪ, ಪೆನಾಯಿಲ್, ಲಿಕ್ವಿಡ್ ಸೋಪ್, ಎನ್ವಲಪ್ ಕವರ್, ಪೇಪರ್ ಬ್ಯಾಗ್, ಹೇರ್ ಆಯಿಲ್, ಪ್ಲೇಟ್ ಪೌಡರ್, ಹರ್ಬಲ್ ಸೋಪ್, ಬ್ಯೂಟಿಷಿಯನ್ಟೈಲರಿಂಗ್, ಕಸೂತಿ, ಗೃಹ ಅಲಕಾಂರಿಕ ವಸ್ತುಗಳು, ಮೆಹಂದಿ ಮತ್ತಿತರ ವಸ್ತುಗಳ ತಯಾರಿಕಾ ತರಬೇತಿ ನೀಡಲಾಗುವುದು ಎಂದು ಸಂಸ್ಥೆ ತಿಳಿಸಿದೆ. ಮೊ- 9739165318.
ಉಚಿತ ತಪಾಸಣೆ
ಶಿವಮೊಗ್ಗ: ಮೆಡಿಕೇರ್ ಹೆಲ್ತೆ ಸೆಂಟರ್ನಲ್ಲಿ ಆ.4ರಂದು ಬೆಳಿಗ್ಗೆ 10.30ರಿಂದ ಮಧ್ಯಾಹ್ನ 1.30ರವರಗೆ ಆಯುರ್ವೇದ ವಿಭಾಗದಲ್ಲಿ ಗುದರೋಗಿಗಳಿಗೆ ಉಚಿತ ತಪಾಸಣೆ ಹಾಗೂ ಸಲಹಾ ಶಿಬಿರ ಏರ್ಪಡಿಸಿದೆ. ಪೈಲ್ಸ್, ಫಿಜರ್, ಪಿಸ್ತುಲಾ ಸೇರಿದಂತೆ ಮತ್ತಿತರ ಕಾಯಿಲೆಗಳಿಗೆ ಚಿಕಿತ್ಸೆ ನೀಡಲಾಗುವುದು. ಆಯುರ್ವೇದ ತಜ್ಞರು ತಪಾಸಣೆ ಮಾಡುವರು ಎಂದು ಡಾ. ಪ್ರಶಾಂತ್ ತಿಳಿಸಿದ್ದಾರೆ. ವಿವರಗಳಿಗಾಗಿ- 08182-659589.
6ರಂದು ಅಭಿಷೇಕ
ಶಿವಮೊಗ್ಗ: ಕೋಟೆ ರಸ್ತೆಯ ಶ್ರೀ ಶನೈಶ್ಚರ ಸೇವಾ ಸಮಿತಿ ಟ್ರಸ್ಟ್ ಆ.6ರಂದು ಅಮಾವಾಸ್ಯೆ ಪ್ರಯುಕ್ತ ಶ್ರೀ ಸನ್ನಿಧಿಯಲ್ಲಿ ಬೆಳಿಗ್ಗೆ 6.30ರಿಂದ 7.30ರವರೆಗೆ ನವಗ್ರಹ ಮೂಲಬಿಂಬಕ್ಕೆ ಪಂಚಾಮೃತ ಅಭಿಷೇಕ ಏರ್ಪಡಿಸಿದೆ. ನವಗ್ರಹ ಪೂರ್ವಕ ಶನಿಶಾಂತಿ ಹೋಮ ಇರುತ್ತದೆ ಎಂದು ಟ್ರಸ್ಟ್ನ ಆರ್ಚಕ ವೃಂದ ತಿಳಿಸಿದೆ.- 9449699584.