ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ನಾಳೆ ಜೀವ ರಕ್ಷಣೆಯ ಕಾರ್ಯಾಗಾರ

Rashmi Kasaragodu
Updated On : 3 Aug 2013, 11:21 am

ಕ.ಪ್ರ.ವಾರ್ತೆ ಟಿ ಶಿವಮೊಗ್ಗ ಟಿ  ಆ.2
ಇಂದಿನ ದಿನಗಳಲ್ಲಿ ಯಾವ ಕ್ಷಣದಲ್ಲಾದರೂ ಅಪಘಾತ ಸಂಭವಿಸುವ ಸಾಧ್ಯತೆ ಇದ್ದು, ಇಂತಹ ಸಂದರ್ಭದಲ್ಲಿ ಪ್ರಾಥಮಿಕ ಚಿಕಿತ್ಸೆ ಮಾಡಿದರೆ ಜೀವ ರಕ್ಷಿಸಬಹುದು. ಆದರೆ ಪ್ರಾಥಮಿಕ ಚಿಕಿತ್ಸೆ ನೀಡುವುದು ಹೇಗೆಂದೇ ಬಹಳಷ್ಟು ಜನರಿಗೆ ಗೊತ್ತಿಲ್ಲ.
ಈ ದಿಸೆಯಲ್ಲಿ ವೈದ್ಯ ಸಿಬ್ಬಂದಿಗೆ ಹಾಗೂ ಸಾರ್ವಜನಿಕರಿಗೆ ಅರಿವು ಮೂಡಿಸಲು ಭಾರತೀಯ ಮಕ್ಕಳ ತಜ್ಞ ವೈದ್ಯರ ಸಂಘದ ಶಿವಮೊಗ್ಗ ಶಾಖೆ ಆ.4ರಂದು ನಗರದ ಐಎಂಎ ಹಾಲ್ನಲ್ಲಿ ಪ್ರಾಥಮಿಕ ಜೀವ ರಕ್ಷಣೆಯ ಕಾರ್ಯಾಗಾರ ಆಯೋಜಿಸಿದೆ.
ಡಾ. ಸುಬ್ರಹ್ಮಣ್ಯ ಮಾಹಿತಿ: ಬೆಳ್ಗಗೆ 10ರಿಂದ ವೈದ್ಯ ಸಿಬ್ಬಂದಿಗೆ, ಮಧ್ಯಾಹ್ನ 1.30ರಿಂದ ಸಾರ್ವಜನಿಕರು ಹಾಗೂ ಆರಕ್ಷಕ ಸಿಬ್ಬಂದಿಗೆ ಕಾರ್ಯಾಗಾರ ನಡೆಯಲಿದೆ. ಭಾರತೀಯ ಮಕ್ಕಳ ವೈದ್ಯರ ಒಕ್ಕೂಟದ ಡಾ. ಆರೀಫ್ ಅಹಮದ್, ರಾಜ್ಯ ಒಕ್ಕೂಟದ ಡಾ. ಕರುಣಾಕರ, ಕೇಂದ್ರ ಒಕ್ಕೂಟದ ಡಾ. ಸುಬ್ರಹ್ಮಣ್ಯ ಮಾಹಿತಿ ನೀಡಲಿದ್ದಾರೆ ಎಂದು ಸಂಘದ ಜಿಲ್ಲಾ ಕಾರ್ಯದರ್ಶಿ ಡಾ. ಬಿ.ಎಲ್. ಯತೀಶ ಹೇಳಿದ್ದಾರೆ. ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಈ ಕುರಿತು ಮಾಹಿತಿ ನೀಡಿದರು.
ಆ.1ರಿಂದ 7ರ ವರೆಗೆ ಜಾಗತಿಕ ಸ್ತನ್ಯಪಾನ ಸಪ್ತಾಹ ಆಚರಿಸುತ್ತಿದ್ದು, ಮಗು ಜನಿಸಿದ ಅರ್ಧ ಗಂಟೆಯೊಳಗೆ ತಾಯಿ ಹಾಲು ಕುಡಿಸಬೇಕು. ಮೊದಲು 3ರಿಂದ 5 ದಿನ ಉತ್ಪತ್ತಿಯಾಗುವ ಹಾಲನ್ನು ಕೊಲೆಸ್ಟ್ರಾಲ್ ಎಂದು ಕರೆಯುತ್ತಿದ್ದು, ಇದರಲ್ಲಿ ರೋಗ ನಿರೋಧಕ ಅಂಶ ಹೆಚ್ಚಿನ ಪ್ರಮಾಣದಲ್ಲಿ ಇರುತ್ತವೆ. ಇದನ್ನು ಮಗುವಿನ ಚುಚ್ಚುಮದ್ದು ಎಂದು ಹೇಳುತ್ತಾರೆ. ಸ್ತನ್ಯಪಾನಕ್ಕೆ ಸೂಕ್ತವಾದ ಬೆಂಬಲ ತಾಯಂದಿರ ಸನಿಹಕ್ಕೆ ಎಂಬುದು ಈ ವರ್ಷದ ಘೋಷವಾಕ್ಯ ಎಂದರು.
ನಗರದ ಸಿನ್ಸ್ ಮತ್ತು ಸುಬ್ಬಯ್ಯ ಮೆಡಿಕಲ್ ಕಾಲೇಜುಗಳಲ್ಲಿ ಪ್ರಬಂಧ ರಚನೆ, ಪೋಸ್ಟರ್ ರಚನೆ ಸ್ಪರ್ಧೆ ಏರ್ಪಡಿಸಲಾಗಿತ್ತು. ಮಕ್ಕಳ ಕ್ಲಿನಿಕ್ ಮತ್ತು ಆಸ್ಪತ್ರೆಗಳಲ್ಲಿ ಅತಿಸಾರ ಮತ್ತು ಜೀವಜಲ ಕುರಿತು ಮಾಹಿತಿ ನೀಡಲಾಯಿತು. ಭದ್ರಾವತಿ ಆಕಾಶವಾಣಿಯಿಂದ ನೇರ ಪ್ರಸಾರ ಕಾರ್ಯಕ್ರಮ ನಡೆಸಿಕೊಡಲಾಯಿತು.
ಗೋಷ್ಠಿಯಲ್ಲಿ ಮಕ್ಕಳ ತಜ್ಞ ವೈದ್ಯರ ಸಂಘದ ಶಿವಮೊಗ್ಗ ಶಾಖೆ ಅಧ್ಯಕ್ಷ ಡಾ. ಬಿ.ಎನ್. ಶ್ರೀನಿವಾಸ್, ಖಜಾಂಚಿ ಡಾ. ಶಂಭುಲಿಂಗ ಬಂಕೊಳ್ಳಿ, ಡಾ. ಧನಂಜಯ ಸರ್ಜಿ ಮತ್ತಿತರರು ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement