ನೀರು ಮಿಶ್ರಿತ ಮದ್ಯ ಮಾರಾಟ: ಇಬ್ಬರ ಬಂಧನ
ಶಿವಮೊಗ್ಗ: ಮದ್ಯದ ಬಾಟಲಿಗಳಲ್ಲಿ ನೀರು ಮಿಶ್ರಣ ಮಾಡಿ ಮದ್ಯ ಮಾರಾಟ ಮಾಡುತ್ತಿದ್ದ ಹೊಳೆಹೊನ್ನೂರಿನ ಲಯನ್ ಬಾರ್ ಅಂಡ್ ರೆಸ್ಟೋರೆಂಟ್ನ ಮೇಲೆ ಅಬಕಾರಿ ಇಲಾಖೆ ಸಿಬ್ಬಂದಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಅನಿರೀಕ್ಷಿತ ದಾಳಿ ನಡೆಸಿದ ತಂಡ, ರೆಸ್ಟೋರೆಂಟ್ನ ಸಿಬ್ಬಂದಿ ತಿಮ್ಮೇಗೌಡ ಮತ್ತು ಕಾಂತರಾಜ್ ಎಂಬುವವರನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ
ದಾಳಿಯ ಸಂದರ್ಭದಲ್ಲಿ ಬಾರ್ ಅಂಡ್ರೆಸ್ಟೋರೆಂಟ್ನಲ್ಲಿದ್ದ 2.50ಲಕ್ಷ ರುಪಾಯಿ ಮೌಲ್ಯದ ಮದ್ಯವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದ ಅವರು ಬಾರ್ ಮಾಲೀಕರಾದ ರಾಘವೇಂದ್ರ ಮತ್ತು ಮಂಜುನಾಥ ಅವರ ಬಂಧನಕ್ಕೆ ಕ್ರಮಕೈಗೊಳ್ಳಲಾಗಿದೆ ಎಂದು ಎಂದು ಅಬಕಾರಿ ಇಲಾಖೆಯ ಉಪ ಆಯುಕ್ತ ಆರ್.ವೆಂಕಟೇಶ ಪದಕಿ ತಿಳಿಸಿದ್ದಾರೆ. ಅಬಕಾರಿ ನಿರೀಕ್ಷಕ ಹನುಮಂತಪ್ಪ,ಮಂಜಯ್ಯ, ಎಸ್.ಡಿ.ಚಂದ್ರಪ್ಪ, ಮಡಿವಾಳಪ್ಪ ಮುಂತಾದವರು ಪಾಲ್ಗೊಂಡಿದ್ದರು.