ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಪೋಷಕ ಸದಸ್ಯತ್ವ ಅಭಿಯಾನ ಪ್ರಾರಂಭ

Mainashree
Updated On : 4 Aug 2013, 1:06 am

ಶಿವಮೊಗ್ಗ: ಶಿವಮೊಗ್ಗ ಬೆಳ್ಳಿಮಂಡಲವು ಇದೀಗ ನಾಲ್ಕನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ್ದು, ಈ ಸಾಲಿನಲ್ಲಿ ಪೋಷಕ ಸದಸ್ಯತ್ವ ಅಭಿಯಾನವನ್ನು ಆರಂಭಿಸಿದೆ.
ಈ ವರ್ಷದ ಚಟುವಟಿಕೆಗಳು ಆಗಸ್ಟ್ 11ರ ಭಾನುವಾರದಿಂದ ಆರಂಭವಾಗಲಿದ್ದು, ಮುಂದಿನ ಆಗಸ್ಟ್‌ವರೆಗಿನ ಒಂದು ವರ್ಷದಲ್ಲಿ ಪ್ರತೀ ಎರಡು ತಿಂಗಳಿಗೊಮ್ಮೆ ಎರಡು ದಿನಗಳ ತಲಾ ಮೂರು ಸಿನಿಮಾ ಉತ್ಸವಗಳು, ಮಕ್ಕಳ ಚಿತ್ರೋತ್ಸವಗಳು, ಅಂತರಾಷ್ಟ್ರೀಯ ಚಿತ್ರೋತ್ಸವ, ದಸರಾ ಚಿತ್ರೋತ್ಸವ ಸೇರಿದಂತೆ ಹಲವು ಚಿತ್ರೋತ್ಸವಗಳು, ಚಲನಚಿತ್ರ ರಸಗ್ರಹಣ ಶಿಬಿರಗಳು, ಚಲನಚಿತ್ರ ಕಲಾವಿದರು, ತಂತ್ರಜ್ಞರೊಂದಿಗೆ ಸಂವಾದಗಳನ್ನು  ನಡೆಸಲು ಚಿಂತನೆ ನಡೆಸಲಾಗಿದೆ.
ಪೋಷಕ ಸದಸ್ಯತ್ವ ಶುಲ್ಕ ಒಬ್ಬರಿಗೆ ವರ್ಷಕ್ಕೆ 300 ನಿಗದಿಯಾಗಿದ್ದು, ಪ್ರತೀ ಕಾರ್ಯಕ್ರಮದ ಆಹ್ವಾನ ಪತ್ರಿಕೆ, ಪಾಸ್‌ಗಳನ್ನು ಪ್ರತ್ಯೇಕವಾಗಿ ಸ್ಥಳೀಯ ಅಂಚೆ ಮೂಲಕ ಮನೆ ಮನೆಗೇ ತಲುಪಿಸಲಾಗುವುದು.
 ಈಗಾಗಲೇ ಪೋಷಕ ಸದಸ್ಯರಾಗಿರುವವರು ತಮ್ಮ ಸದಸ್ಯತ್ವವನ್ನು ನವೀಕರಿಸಬೇಕಾಗಿ ಕೋರಲಾಗಿದ್ದು, ಚಲನಚಿತ್ರ ಅಭಿಮಾನಿಗಳು ಶಿವಮೊಗ್ಗ ಬೆಳ್ಳಿಮಂಡಲಕ್ಕೆ ಪೋಷಕ ಸದಸ್ಯರಾಗುವುದರ ಮೂಲಕ ಸಂಸ್ಥೆಯನ್ನು ಬಲಪಡಿಸಬೇಕಾಗಿ ವಿನಂತಿಸಲಾಗಿದೆ. ಸದಸ್ಯತ್ವಕ್ಕಾಗಿ ವೈದ್ಯ 98444 56505, ಚೇತನ್ 98441 53534, ಡಾ. ನಾಗಭೂಷಣ 94492 84495, ಆನಂದ 94482 55500, ಎನ್.ಬಿ.  ರವೀಶ 94497 16571, ವಿ.ಡಿ.ವಿ. ಪ್ರಸಾದ್ 98440 19767 ಸಂಪರ್ಕಿಸಬಹುದು ಎಂದು ಬೆಳ್ಳಿಮಂಡಲ ಸಂಚಾಲಕ ವೈದ್ಯ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement