ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಮಲೆನಾಡ ಮಳೆಗೆ 2 ನೇಬಲಿ

Mainashree
Updated On : 4 Aug 2013, 1:03 am

ಶಿವಮೊಗ್ಗ: ಮಲೆನಾಡಿನ ಮಳೆ ಎರಡನೇ ಬಲಿ ಪಡೆದಿದೆ. ಗೋಡೆ ಕುಸಿದು ತೀವ್ರವಾಗಿ ಗಾಯಗೊಂಡಿದ್ದ ಸೊರಬ ತಾಲೂಕಿನ ಜಡೆ ಹೋಬಳಿ ತುಮರಿಕೊಪ್ಪದ ಬಾಲಕ ಮಂಜುನಾಥ (5) ಶುಕ್ರವಾರ ರಾತ್ರಿ ಮೃತಪಟ್ಟಿದ್ದಾನೆ.
   ಈತ ಗುರುವಾರ ಬೆಳಿಗ್ಗೆ ಸ್ನಾನ ಮಾಡಿ ಒಲೆಯ ಮುಂದೆ ಬೆಂಕಿ ಕಾಯಿಸುತ್ತಿರುವಾಗ ಬಚ್ಚಲು ಮನೆಯ ಗೋಡೆ ಕುಸಿದು ಮೈಮೇಲೆ ಬಿದ್ದ ಪರಿಣಾಮ ತೀವ್ರ ಸ್ವರೂಪದ ಗಾಯಗೊಂಡಿದ್ದ. ನಂತರ ಬಾಲಕನನ್ನು ಶಿರಸಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ರಾತ್ರಿ ಮೃತಪಟ್ಟಿದ್ದಾನೆ. ಆನವಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗೋಡೆ ಕುಸಿತ: ಮಳೆಯಿಂದ ಶಿಥಿಲವಾಗಿದ್ದ ಮನೆಯೊಂದರ ಗೋಡೆಯು ಕುಸಿದ ಘಟನೆ ಶಿವಮೊಗ್ಗದ ನ್ಯೂಮಂಡ್ಲಿಯಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ. ಇದನ್ನು ಹೊರತುಪಡಿಸಿ ತುಂಗ, ಭದ್ರಾ, ಶರಾವತಿ, ವರದಾ, ದಂಡಾವತಿ ಸೇರಿದಂತೆ ಜಿಲ್ಲೆಯ ಹಲವು ಜೀವನದಿಗಳು ಉಕ್ಕಿ ಹರಿಯುತ್ತಿದ್ದು, ಪ್ರವಾಹ ಮಟ್ಟದಲ್ಲಿ ಶನಿವಾರವೂ ಸಹ ಇಳಿಕೆಯಾಗಿಲ್ಲ.
ಆದರೆ ಮಳೆ ಪ್ರಮಾಣ ಶುಕ್ರವಾರಕ್ಕಿಂತ ಕಡಿಮೆಯಾಗಿದೆ.
 ಲಿಂಗನಮಕ್ಕಿ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಜಲಾಶಯಕ್ಕೆ 65 ಸಾವಿರ ಕ್ಯುಸೆಕ್ ನೀರು ಹರಿದುಬರುತ್ತಿದ್ದು, ಜೋಗ ಜಲಪಾತದ ರೌದ್ರ ನರ್ತನ ಜನರನ್ನು ಆಕರ್ಷಿಸುತ್ತಿದೆ. ಇನ್ನು ತುಂಗಾ ಹಾಗೂ ಭದ್ರಾ ನದಿಯಲ್ಲಿ ಪ್ರವಾಹ ಹೆಚ್ಚಾಗಿದ್ದು, ಎರಡೂ ನದಿಗಳ ಒಟ್ಟು ಹೊರಹರಿವು 1 ಲಕ್ಷ ದಾಟಿದೆ. ಜಿಲ್ಲೆಯ ಬಹುತೇಕ ಎಲ್ಲಾ ಜಲಾಶಯಗಳು ಭರ್ತಿಯಾಗಿವೆ.
ಮಳೆ ಇಳಿಮುಖ: ಜಿಲ್ಲೆಯಾದ್ಯಂತ ಮಳೆ ಕುಂಠಿತವಾಗಿದ್ದು, ಈ ನಡುವೆ ಹುಂಚದಕಟ್ಟೆಯಲ್ಲಿ 12 ಸೆ.ಮೀ., ಹೊಸನಗರ 9, ಆಗುಂಬೆ 8, ತೀರ್ಥಹಳ್ಳಿ 5, ಲಿಂಗನಮಕ್ಕಿ 4, ಸಾಗರ ಹಾಗೂ ಭದ್ರಾವತಿ 2, ಅರಸಾಳು, ಆನವಟ್ಟ ಹಾಗೂ ಶಿರಾಳಕೊಪ್ಪದಲ್ಲಿ ತಲಾ 1 ಸೆ.ಮೀ. ಮಳೆಯಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement