ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಸುದ್ದಿ ಸಂಕ್ಷೇಪ

Mainashree
Updated On : 4 Aug 2013, 1:06 am

ಉಚಿತ ಸೇವಾ ಶಿಬಿರ
ಶಿವಮೊಗ್ಗ: ನೆಹರು ರಸ್ತೆಯಲ್ಲಿರುವ ಶ್ಯಾಮ್ ಟ್ರೇಡರ್ಸ್ ಪ್ರೆಸ್ಟೇಜ್ ಕಂಪನಿ ಆ.1ರಿಂದ 8ದಿನಗಳ ಉಚಿತ ಸೇವಾ ಶಿಬಿರ ಆಯೋಜಿಸಿದೆ. ಗ್ರಾಹಕರು ತಮ್ಮಲ್ಲಿರುವ ಪ್ರೆಸ್ಟೀಜ್ ಕಂಪನಿಯ ಹಳೇಯ ಕುಕ್ಕರ್‌ಫ್ಯಾನ್‌ಗಳನ್ನು ಉಚಿತವಾಗಿ ರಿಪೇರಿ ಮಾಡಿಸಿಕೊಳ್ಳಬಹುದು (ಬದಲಾಯಿಸುವ ಬಿಡಿ ಭಾಗಗಳಿಗೆ ಮಾತ್ರ ಬೆಲೆ ನೀಡಬೇಕು). ಅಲ್ಲದೇ, ಉಚಿತ ಸೇವಾ ಶಿಬಿರದಲ್ಲಿ ಪ್ರೆಸ್ಟೆಜ್ ಕಂಪನಿಯ ಉತ್ವನ್ನಗಳ ಮೇಲೆ ಭಾರಿ ರಿಯಾಯಿತಿ ನೀಡಲಾಗುತ್ತದೆ. ಗ್ರಾಹಕರು ಇದರ ಉಪಯೋಗ ಪಡೆದುಕೊಳ್ಳಬಹುದು ಎಂದು ಟ್ರೇಡರ್ಸ್ ತಿಳಿಸಿದೆ.
ಅವಧಿ ವಿಸ್ತರಣೆ
ಶಿವಮೊಗ್ಗ: ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮದ ವಿವಿಧ ಯೋಜನೆಗಳಡಿಯಲ್ಲಿ ಹಿಂದುಳಿದ ವರ್ಗಗಳ ಅರ್ಹ ಅಭ್ಯರ್ಥಿಗಳಿಂದ ಸಾಲದ ಅರ್ಜಿಗಳನ್ನು ಸ್ವೀಕರಿಸಲು ನಿಗದಿಗೊಳಿಸಿದ್ದ ದಿನಾಂಕವನ್ನು ಆ.17ರವರೆಗೆ ವಿಸ್ತರಿಸಲಾಗಿದೆ ಎಂದು ನಿಗಮದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.
ಬಸಪ್ಪ ಆಯ್ಕೆ
ಭದ್ರಾವತಿ: ಪಟ್ಟಣದ ಭುವನೇಶ್ವರಿ ಮಿನಿ ಲಾರಿ ಮಾಲೀಕರ ಮತ್ತು ಚಾಲಕರ ಸಂಘದ ಚುನಾವಣೆ ಗುರುವಾರ ನಡೆದು, ಸಂಘದ ಅಧ್ಯಕ್ಷರಾಗಿ ಬಸಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಗಂಗಾಧರಪ್ಪ, ಕಾರ್ಯದರ್ಶಿಯಾಗಿ ತಮ್ಮಯ್ಯ, ಸಹ ಕಾರ್ಯದರ್ಶಿಯಾಗಿ ವೈ. ಚಂದ್ರಶೇಖರ ಮತ್ತು ಖಜಾಂಚಿಯಾಗಿ ವಾಜಿದ್ ಆಯ್ಕೆಯಾಗಿದ್ದಾರೆ. ಕಾರ್ಯಕಾರಿ ಸಮಿತಿ ಸದಸ್ಯರಾಗಿ ರಮೇಶ್, ಜಡ್ಜ್‌ಮನ್ ವಾರ್ಡ್, ಇಮ್ರಾನ್, ಲೋಕೇಶ್, ಅಮಾನುಲ್ಲಾ, ಆಯ್ಕೆಯಾಗಿದ್ದಾರೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.
ಇಂದು ಚಾರಣ
ಶಿವಮೊಗ್ಗ: ಯೂತ್ ಹಾಸ್ಟೆಲ್ ಅಸೋಶಿಯೇಷನ್ ಆಫ್ ಇಂಡಿಯಾ ತರುಣೋದಯ ಘಟಕವು ಆಗಸ್ಟ್ 4ರಂದು ಭಾನುವಾರ ಸೋಮೇಶ್ವರದಿಂದ ಆಗುಂಬೆಯವರೆಗೂ ಮಳೆಗಾಲದ ಚಾರಣವನ್ನು ಏರ್ಪಡಿಸಿದೆ. ಆಸಕ್ತ ಚಾರಣಿಗರು ಯೂತ್ ಹಾಸ್ಟೆಲ್ ಕಾರ್ಯದರ್ಶಿ ಜಿ.ವಿಜಯಕುಮಾರ್ ಅವರನ್ನು ಆಗಸ್ಟ್ 3ರಂದು ಸಂಪರ್ಕಿಸಲು ಕೋರಲಾಗಿದೆ. (ಮೊ 94481 05198)
ರಾಜ್ಯ ಮಟ್ಟಕ್ಕೆ ಸ್ಫೂರ್ತಿ
ಶಿವಮೊಗ್ಗ: ಸಾರ್ವಜನಿಕ ಶಿಕ್ಷಣ ಇಲಾಖೆಯು ಆಯೋಜಿಸಿದ್ದ ಜಿಲ್ಲಾ ಮಟ್ಟದ ಇನ್ಸ್‌ಫೈರ್ ಆವಾರ್ಡ್ ವಿಜ್ಞಾನ ಮಾದರಿ ವಸ್ತು ಪ್ರದರ್ಶನಗಳ ಸ್ಪರ್ಧೆಯಲ್ಲಿ ದುರ್ಗಿಗುಡಿಯ ಸರ್ಕಾರಿ ಮಾದರಿ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿನಿ ಎಂ. ಸ್ಫೂರ್ತಿ ರೂಪಿಸಿದ ಶಕ್ತಿಯ ರೂಪಾಂತರದ ಮಾದರಿ ಆಯ್ಕೆಯಾಗಿದ್ದು, ರಾಜ್ಯ ಮಟ್ಟಕ್ಕೆ ಆಯ್ಕೆಗೊಂಡಿದ್ದಾಳೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement