ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ರಾಜ್ಯಶಾಸ್ತ್ರ ವಿಭಾಗದ ಹಳೇ ವಿದ್ಯಾರ್ಥಿಗಳ ಸಂಘ ಅಸ್ಥಿತ್ವಕ್ಕೆ

Vishwanath S
Updated On : 5 Aug 2013, 1:00 am

ಶಿವಮೊಗ್ಗ: ಕುವೆಂಪು ವಿಶ್ವ ವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಹಳೆಯ ವಿದ್ಯಾರ್ಥಿಗಳ ಸಂಘ ಅಸ್ಥಿತ್ವಕ್ಕೆ ಬಂದಿದೆ.  ಕಮಲಾ ನೆಹರು ಕಾಲೇಜಿನಲ್ಲಿ ನಡೆದ ಹಳೆ ವಿದ್ಯಾರ್ಥಿಗಳ ಸಭೆಯಲ್ಲಿ ನೂತನ ಸಂಘ ರಚಿಸಿ, ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಸಂಘದ ಗೌರವಾಧ್ಯಕ್ಷರಾಗಿ ಕುವೆಂಪು ವಿವಿ ರಾಜ್ಯಶಾಸ್ತ್ರ ವಿಭಾಗದ ಅಧ್ಯಕ್ಷ ಡಾ.ಜೆ.ಎಸ್. ಸದಾನಂದ್, ತಜ್ಞ ಸಲಹೆಗಾರರಾಗಿ ಡಾ.ಎಸ್.ಎ. ಜಾವೀದ್, ಡಾ.ಎ. ಷಣ್ಮುಖ ಆಯ್ಕೆಯಾಗಿದ್ದಾರೆ. ಸಂಘದ ಅಧ್ಯಕ್ಷರಾಗಿ ಉಪನ್ಯಾಸಕ ಡಾ.ಕೆ. ಚಂದ್ರಪ್ಪ, ಉಪಾಧ್ಯಕ್ಷರಾಗಿ ರಾಘವೇಂದ್ರ ಕಿಣಿ, ಆರ್.ನಿರ್ಮಲ, ಕಾರ್ಯದರ್ಶಿಯಾಗಿ ಡಾ. ಕಿರಣ್ ಗಾಜನೂರು, ಸಹ ಕಾರ್ಯದರ್ಶಿಯಾಗಿ ಡಾ.ಆರ್.ಜಿ. ಚಿದಾನಂದ, ಸಂಘಟನಾ ಕಾರ್ಯದರ್ಶಿಯಾಗಿ ಡಾ.ಕೆ.ಎಂ. ಕುಮಾರ್, ಕೋಶಾಧ್ಯಕ್ಷರಾಗಿ ಎಸ್. ಎಚ್. ರವಿಕುಮಾರ್, ನಿರ್ದೇಶಕರಾಗಿ ಡಾ. ಓಂಕಾರಪ್ಪ, ಡಾ.ಎಂ.ಎಚ್. ಪ್ರಹ್ಲಾದ್, ಡಾ. ವೀರಪ್ಪ, ವಿ.ಟಿ. ಅರುಣ್, ಸುನೀಲ್ ಕುಮಾರ್ ಶಿವನಲ್ಲಿ, ಬನುಮಾ, ಎಸ್.ಟಿ. ಪವಿತ್ರ, ಬಿ.ಎಸ್. ಸುಧಾ ಆಯ್ಕೆಯಾಗಿದ್ದಾರೆ.
ಕುವೆಂಪು ವಿವಿ ವ್ಯಾಪ್ತಿಯ ರಾಜ್ಯಶಾಸ್ತ್ರ ವಿಭಾಗದ ಹಳೆಯ ವಿದ್ಯಾರ್ಥಿಗಳು ಸಂಘದ ಸದಸ್ಯತ್ವ ಪಡೆಯಬಹುದಾಗಿದ್ದು, ಮಾಹಿತಿಗಾಗಿ ಕಾರ್ಯದರ್ಶಿ ಕಿರಣ್ ಗಾಜನೂರು (ಮೊ-97417 37344) ಅವರನ್ನು ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement