ಗೌಡನಕೆರೆಗೆ ಬಾಗಿನ ಅರ್ಪಣೆ
ಕ.ಪ್ರ.ವಾರ್ತೆ, ಶಿವಮೊಗ್ಗ, ಆ.5
ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್ ದಂಪತಿಗಳು ಸೋಮವಾರ ಆಯನೂರಿನ ಗೌಡನಕೆರೆಗೆ ಬಾಗಿನ ಅರ್ಪಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಗೆ ಗೌಡನಕೆರೆ ತುಂಬಿರುವುದು ಸಂತಸ ತಂದಿದೆ ಎಂದರು. ಕೆರೆ ಅಭಿವೃದ್ಧಿಗಾಗಿ 5 ಲಕ್ಷ ನೆರವು ನೀಡುವುದಾಗಿ ಭರವಸೆ ನೀಡಿದರು. ಅಲ್ಲದೇ ಸಂಸದರ ಅನುದಾನದಲ್ಲಿ ಕೆರೆಗೆ ಕಟ್ಟೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗಲು ಬಸ್ ತಂಗುದಾಣ ನಿರ್ಮಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಇಟ್ಟಿಗೆಹಳ್ಳಿ ಗ್ರಾಮಸ್ಥ ನಾಗೇಂದ್ರ, ತಾಲೂಕು ಪಂಚಾಯಿತಿ ಅಧ್ಯಕ್ಷೆ ದೇವಿಬಾಯಿ ಧರ್ಮನಾಯ್ಕ್,
ಆಯನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾಗ್ಯನರಸಿಂಹ, ಕಾರ್ಯದರ್ಶಿ ಮಂಜುನಾಥ್, ಸದಸ್ಯ ಜಯರಾಂ, ರವಿಕುಮಾರ್, ಗ್ರಾಮಸ್ಥರಾದ ಪದ್ಮಿನಿ, ಕುಪ್ಪೇಂದ್ರ, ಸ್ಥಳೀಯ ಎಲ್ಲಾ ಗ್ರಾಮಸ್ಥರು ಉಪಸ್ಥಿತರಿದ್ದರು.