ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಮಹಾಪುರುಷ ಪುಸ್ತಕ ಲೋಕಾರ್ಪಣೆ

Lingaraj Badiger
Updated On : 7 Aug 2013, 10:44 am

ಶಿವಮೊಗ್ಗ: ಬರಹಗಾರ ಕೆ. ಜಯರಾಮ ಅವರು ಬರೆದಿರುವ ಶ್ರೀ ಕೋಟೆ ಸೀತಾರಾಮಾಂಜನೇಯಸ್ವಾಮಿ ದೇವಾಲಯದ ಅರ್ಚಕ ಅನಂತರಾಮ ಅಯ್ಯಂಗಾರ ಅವರ ಜೀವನಚರಿತ್ರೆಯನ್ನೊಳಗೊಂಡ ಮಹಾಪುರುಷ ಪುಸ್ತಕ ಲೋಕಾರ್ಪಣೆಗೊಂಡಿದೆ.
 ಮಂಗಳವಾರ ಶ್ರೀ ಕೋಟೆ ಸೀತಾರಾಮಾಂಜನೇಯಸ್ವಾಮಿ ದೇವಾಲಯ ಆವರಣದಲ್ಲಿ ಭಾರತೀಯ ವಿಚಾರ ವೇದಿಕೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಚಲನಚಿತ್ರ ನಿರ್ದೇಶಕ ಟಿ.ಎಸ್. ನಾಗಾಭರಣ ಹಾಗೂ ಕನ್ನಡ ಅರ್ಚಕ ಹಿರೇಮಗಳೂರು ಕಣ್ಣನ್ ಅವರು ಪುಸ್ತಕ ಬಿಡುಗಡೆ ಮಾಡಿದರು.
 ನಂತರ ಮಾತನಾಡಿದ ಚಲನಚಿತ್ರ ನಿರ್ದೇಶಕ ಟಿ.ಎಸ್. ನಾಗಾಭರಣ, ಪ್ರಸ್ತುತ ನಾವು ಯಾದ ದಿಕ್ಕಿನಲ್ಲಿ ಇದ್ದೇವೆ. ಏಕೆ ಹೋಗುತ್ತಿದ್ದೇವೆ ಎಂದು ತಿಳಿಸಲಾಗದ ಜನರ ನಡುವೆ ಜೀವನ ಮಾಡುತ್ತಿದ್ದೇವೆ. ಇದು ನಮ್ಮ ದುರದೃಷ್ಟ. ಇಂತಹ ವ್ಯಕ್ತಿಗಳ ನಡುವೆ ಅನಂತರಾಮ ಅಯ್ಯಂಗಾರ ಅವರು ಒಬ್ಬ ಆದರ್ಶ ವ್ಯಕ್ತಿ ಆಗಿದ್ದರು ಎಂದರು.
 ನಮ್ಮ ನಡುವೆ ಪವಾಡ ಪುರುಷರು ಇದ್ದಾರೆ. ಕೋಟಿಗಟ್ಟಲೆ ಹಣ ಮಾಡುವ ಪುರುಷರು ಇದ್ದಾರೆ. ಇವರ ನಡುವೆ ಪೂರ್ಣಪ್ರಮಾಣದಲ್ಲಿ ಭಕ್ತಸಮೂಹವನ್ನು ಸಂಪಾದಿಸಿದ ಕೀರ್ತಿ ಅನಂತರಾಮ ಅಯ್ಯಂಗಾರರವರಿಗೆ ಸಲ್ಲಬೇಕು ಎಂದ ಅವರು, ನಾನು ಅನ್ನುವವರೆ ಇಂದು ಹೆಚ್ಚಾಗಿದ್ದಾರೆ. ಈ ಪ್ರವೃತ್ತಿ ಕಡಿಮೆ ಆಗಬೇಕು ಎಂದರು.
 ಇಂದಿನ ಜೀವನ ಶೈಲಿಯಲ್ಲಿ ಹಲವಾರು ತೊಡಕುಗಳಿವೆ. ಉತ್ತರಾಖಂಡದ ಜಲಪ್ರಳಯಕ್ಕೆ ದೇವರೇ ಕಾರಣ ಎನ್ನುತ್ತಾರೆ. ಇದಕ್ಕೆ ಮಾನವನೂ ಕಾರಣ ಎಂಬುದನ್ನು ತಿಳಿಯಬೇಕು ಎಂದರಲ್ಲದೇ, ಸಮಾಜ ಎಲ್ಲರನ್ನು ಮಹಾಪುರುಷರನ್ನಾಗಿ ಮಾಡುವುದಿಲ್ಲ. ಎಣಿಕೆಯಷ್ಟೇ ಮಹಾಪುರಷರಲ್ಲಿ ಅನಂತರಾಮ ಅಯ್ಯಂಗಾರರು ಒಬ್ಬರು ಎಂದರು.
 ಇದೇ ವೇಳೆ ಪುಸ್ತಕ ಮುದ್ರಣದಲ್ಲಿ ಸಹಕರಿಸಿದ ಕೃಷ್ಣಚಾರ್, ಸೋಮಶೇಖರ್, ನಾಗರಾಜ, ಕೃಷ್ಣಮೂರ್ತಿ, ವಿನೋದ್‌ರನ್ನು ಸನ್ಮಾನಿಸಲಾಯಿತು. ಶಿವಮೊಗ್ಗ ತಾಲೂಕು ತಹಸೀಲ್ದಾರ್ ಎಚ್. ಕೊಟ್ರೇಶ್, ವ್ಯವಸ್ಥಾಪನಾ ಸಮಿತಿಯ ಅಶ್ವಥನಾರಾಯಣ ಶ್ರೇಷ್ಠಿ, ಕಾರ್ತಿಕ್ ಹೆಬ್ಬಾರ್, ಅರ್ಚಕ ಎಚ್.ಎ. ಕೇಶವಮೂರ್ತಿ ಅಯ್ಯಂಗಾರ್, ಲೇಖಕ ಕೆ. ಜಯರಾಮ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement