ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಸಮುದಾಯ ಭವನ ನಿರ್ಮಾಣಕ್ಕೆ ದೇಣಿಗೆ

Lingaraj Badiger
Updated On : 7 Aug 2013, 10:48 am

ಕ.ಪ್ರ.ವಾರ್ತೆ  ಶಿಕಾರಿಪುರ  ಆ.6 ಪಟ್ಟಣದ ಹೊರವಲಯದಲ್ಲಿ ನಡೆಯುತ್ತಿರುವ ವೀರಶೈವ ಸಮಾಜದ ಸಿದ್ದರಾಮೇಶ್ವರ ಸಮುದಾಯ ಭವನದ ನಿರ್ಮಾಣ ಕಾಮಗಾರಿಗೆ ಲಾಭಾಂಶದಲ್ಲಿನ ರು. 5 ಲಕ್ಷ ಹಣವನ್ನು ದೇಣಿಗೆಯಾಗಿ ನೀಡಲು ನಂದಿ ಪತ್ತಿನ ಸಹಕಾರ ಸಂಘದ ಸರ್ವ ಸದಸ್ಯರ ಮಹಾಸಭೆಯಲ್ಲಿ ಸರ್ವ ಸಮ್ಮತವಾಗಿ ಸದಸ್ಯರು ಒಪ್ಪಿಗೆ ಸೂಚಿಸಿದರು.
ಪಟ್ಟಣದ ಮಂಗಳಭವನದಲ್ಲಿ ಸೋಮವಾರ ನಡೆದ ನಂದಿಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ  ಅದ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಬಿ.ಎಂ ಪಾಲಾಕ್ಷಪ್ಪ, ಸಂಘ ಆರಂಭವಾಗಿ 11 ನೇ ವರ್ಷಕ್ಕೆ ಪಾದಾರ್ಪಣೆಗೈಯುತ್ತಿದ್ದು, ಶೇರುದಾರರ ಸಹಿತ ಸರ್ವ ಸದಸ್ಯರ ಹಿತವನ್ನು ರಕ್ಷಿಸುವ ಪ್ರಾಮಾಣಿಕ ಜವಾಬ್ದಾರಿಯಿಂದ ಹೆಚ್ಚು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದೆ. ಪ್ರತಿವರ್ಷ ಸತತ ಲಾಭಾಂಶದ ಮೂಲಕ ಪಟ್ಟಣದ ಪ್ರತಿಷ್ಠಿತ ಸಂಘವಾಗಿ ತನ್ನ ಅಸ್ತಿತ್ವ ಗುರುತಿಸಿಕೊಂಡಿದೆ ಎಂದರು.
ಸಾಲ ಮರುಪಾವತಿ: ಸಾಲ ಪಡೆದ ಸದಸ್ಯರು ಸರ್ಕಾರದ ಅಧಿಸೂಚನೆ ಮೇರೆಗೆ ಮಾ.21ರೊಳಗೆ ಮರುಪಾವತಿಸಿ ಸಂಘದ ಅಭಿವೃದ್ಧಿಗೆ ಪೂರಕವಾಗಿ ಸಹಕರಿಸುವಂತೆ ಅವರು ಮನವಿ ಮಾಡಿದರು.
ಸಂಘದ ಮಾಜಿ ಅಧ್ಯಕ್ಷ ಎಸ್.ವಿ ಮಹೇಂದ್ರ ಮಾತನಾಡಿ, ಸರ್ಕಾರದ ನೂತನ ಸುತ್ತೋಲೆ ಅನ್ವಯ ಸಂಘದ ಸದಸ್ಯರು 5 ವರ್ಷಗಳಲ್ಲಿ ಕನಿಷ್ಠ 3 ಬಾರಿ ಸಾಮಾನ್ಯ ಸಭೆಗೆ ಹಾಜರಾತಿ ಅನಿವಾರ್ಯವಾಗಿದ್ದು, ಇದರೊಂದಿಗೆ  ಸಂಘದಲ್ಲಿ ವರ್ಷಕ್ಕೆ ಕನಿಷ್ಠ ಒಂದು ಬಾರಿ ವ್ಯವಹರಿಸಬೇಕಾಗಿದೆ ಎಂದರು.
ತಪ್ಪಿದಲ್ಲಿ ಸದಸ್ಯತ್ವವನ್ನು ಸರ್ಕಾರದ ನಿಬಂಧನೆಯನ್ವಯ ರದ್ದುಪಡಿಸುವ ಅನಿವಾರ್ಯ ಸ್ಥಿತಿ ತಲುಪಲಿದೆ ಎಂದು ಸದಸ್ಯರ ಗಮನ ಸೆಳೆದರು. ಹಾಗೂ ಸತತ 3 ವರ್ಷದ ಶೇರು ಲಾಭಾಂಶ ಪಡೆಯದ ಶೇರುದಾರರ ಹಣವನ್ನು ಸಂಘಕ್ಕೆ ಮುಟ್ಟುಗೋಲು ಹಾಕಿಕೊಳ್ಳುವುದಾಗಿ ತಿಳಿಸಿದರು.
ಅಭಿನಂದನೆ: ಕಾರ್ಯಕ್ರಮದಲ್ಲಿ ನಗರ ಹಾಗೂ ಗ್ರಾಮೀಣ ಭಾಗದ ಪ್ರತಿಭಾನ್ವಿತ ಎಸ್ಸೆಸೆಲ್ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳನ್ನು ಹಾಗೂ ಆಡಳಿತ ಮಂಡಳಿ ಸದಸ್ಯರನ್ನು ಅಭಿನಂದಿಸಲಾಯಿತು.  ತಾಲೂಕು ನೊಳಂಬ ವೀರಶೈವ ಸಮಾಜದ ಅಧ್ಯಕ್ಷ ಬಿ.ಡಿ ಭೂಕಾಂತ್, ಸಂಘದ ಉಪಾಧ್ಯಕ್ಷ  ಬಸವರಾಜಪ್ಪ ನಿರ್ದೇಶಕ ಸುಕುಮಾರ್, ಬೂದ್ಯಪ್ಪ, ಮಲ್ಲೇಶಪ್ಪ, ಶೇಖರಪ್ಪ, ಗೌರಮ್ಮ ಗುರುರಾಜ ಜಕ್ಕಿನಕೊಪ್ಪ ಮೊದಲಾದರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement