'ಸಾಹಿತ್ಯಾಭಿರುಚಿಬೆಳೆಸಿಕೊಳ್ಳಿ'
ಕ.ಪ್ರ.ವಾರ್ತೆ ಭದ್ರಾವತಿ ಆ.6 ಮಹಿಳೆಯರು ದೈನಂದಿನ ಚಟುವಟಿಕೆ ನಡುವೆಯೇ ಸಾಹಿತ್ಯ ಅಭಿರುಚಿಯನ್ನೂ ಬೆಳೆಸಿಕೊಳ್ಳುವುದು ಮುಖ್ಯ ಎಂದು ಅನ್ನಪೂರ್ಣ ಸತೀಶ್ ತಿಳಿಸಿದರು.
ಅವರು ಭದ್ರಾವತಿ ತಾಲೂಕು ಕ.ಸಾ.ಪ. ಮಹಿಳಾ ಸಾಹಿತ್ಯ ವೇದಿಕೆಯ ಕಾರ್ಯಕ್ರಮವನ್ನು ಲೇಡೀಸ್ ಕ್ಲಬ್ನಲ್ಲಿ ಉದ್ಘಾಟಿಸಿ ಮಾತನಾಡಿ, ಮಹಿಳೆ ಎಲ್ಲಾ ರಂಗದಲ್ಲಿದ್ದೂ, ಸಾಹಿತ್ಯಕ್ಕೆ ಹೆಚ್ಚು ಒತ್ತು ಕೊಡಬೇಕು ಎಂದರು.
ಲೇಡಿಸ್ ಕ್ಲಬ್ ಕಾರ್ಯದರ್ಶಿ ಸುಧಾಮಣಿ ಮಾತನಾಡಿ, ಮಹಿಳೆಯರು ಅಡುಗೆ ಮನೆ ಮತ್ತು ಮಕ್ಕಳ ಲಾಲನೆ-ಪಾಲನೆಗೆ ಸೀಮಿತವಾಗಿರದೆ ಸಾಮಾಜಿಕ ಹಾಗೂ ಸಾಹಿತ್ಯ ಚಟುವಟಿಕೆಗಳಲ್ಲೂ ಭಾಗವಹಿಸಿ ಕನ್ನಡ ಸಾಹಿತ್ಯದ ಕಂಪು ಪಸರಿಸುವ ಕಾರ್ಯ ಮಾಡಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಏರ್ಪಡಿಸಿದ್ದ ಭಾವಗೀತೆ ಸ್ಪರ್ಧೆಯಲ್ಲಿ ಅರ್ಚನ ದಿನೇಶ್, ಸೀತಾಲಕ್ಷ್ಮಿ ಮತ್ತು ವಿನೋದ ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನಗಳನ್ನು ಪಡೆದರು. ಎಸ್.ಬಿ. ಶಿವಲಿಂಗಪ್ಪ ಮತ್ತು ಜ್ಞಾನೇಶ್ ತೀರ್ಪುಗಾರರಾಗಿ ಭಾಗವಹಿಸಿದ್ದರು.
ಭದ್ರಾವತಿ ತಾಲೂಕು ಕ.ಸಾ.ಪ. ಅಧ್ಯಕ್ಷ ಕೋಗಲೂರು ತಿಪ್ಪೇಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಸೌಭಾಗ್ಯ ಆರಾಧ್ಯ ಪ್ರಾರ್ಥಿಸಿದರು. ಮಂಗಳಾ ಸ್ವಾಗತಿಸಿದರು. ಪುಷ್ಪ ಗಂಗಾಧರ ಕಾರ್ಯಕ್ರಮ ನಿರೂಪಿಸಿದರು. ಗಾಯತ್ರಿ ರಾಮಕೃಷ್ಣಗೌಡ ವಂದಿಸಿದರು. ಕಾರ್ಯಕ್ರಮದಲ್ಲಿ ಹಲವರು ಇದ್ದರು.