ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಮಗುವಿಗೆ ಎದೆಹಾಲು ಶ್ರೇಷ್ಠ ಆಹಾರ

Vishwanath S
Updated On : 8 Aug 2013, 12:13 pm

ಕ.ಪ್ರ.ವಾರ್ತೆ  ಶಿವಮೊಗ್ಗ  ಆ.7
ಎದೆಹಾಲು ಮಗುವಿಗೆ ನೈಸರ್ಗಿಕವಾದ ಶ್ರೇಷ್ಠ ಆಹಾರವಾಗಿದೆ ಎಂದು ಆರೋಗ್ಯ ಸಹಾಯಕಿ ವೈಜಯಂತಿ ಮಾಲಾ ಹೇಳಿದರು.
ಚೋರಡಿ ಗ್ರಾಮ ಪಂಚಾಯಿತಿ, ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಶಿಶು ಅಭಿವೃದ್ಧಿ ಕೇಂದ್ರದ ಸಂಯುಕ್ತಾಶ್ರಯದಲ್ಲಿ ವಿಶ್ವ ಸ್ತನ್ಯಪಾನ ದಿನಾಚರಣೆಯ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಿಶ್ವ ಆರೋಗ್ಯ ಸಂಸ್ಥೆಯ ಶಿಫಾರಸಿನಂತೆ ಜನಿಸಿದ ಎಲ್ಲಾ ಶಿಶುಗಳಿಗೆ ಜನಿಸಿದ 6 ತಿಂಗಳವರೆಗೆ ವಿಶೇಷವಾಗಿ ಎದೆ ಹಾಲುಣಿಸಬೇಕು ಎಂದು ಅವರು ತಿಳಿಸಿದರು.
ಸೋಂಕು ನಿರೋಧಕ ಅಂಶ: ಎದೆ ಹಾಲು ಕುಡಿದ ಮಗು ಅಧಿಕ ಮಟ್ಟದ ಬುದ್ಧಿಮತ್ತೆಯನ್ನು ಹೊಂದಿರುತ್ತದೆ. ಇದು ಮಗು ಮತ್ತು ತಾಯಿಯ ಭಾವನಾತ್ಮಕ ಸಂಬಂಧವನ್ನು ಹೆಚ್ಚಿಸಿ, ಬೆಚ್ಚಗಿನ ಪ್ರೀತಿ ಮತ್ತು ವಿಶ್ವಾಸವನ್ನು ಒದಗಿಸುತ್ತದೆ ಎಂದ ಅವರು ಎಲ್ಲಾ ಆಹಾರಕ್ಕಿಂತಲೂ ಮಿಗಿಲಾದ ತಾಯಿಯ ಎದೆಹಾಲು ಪರಿಶುದ್ಧವಾಗಿದ್ದು, ಬ್ಯಾಕ್ಟೀರಿಯಾಗಳಂತಹ ಸೂಕ್ಷ್ಮಾಣುಗಳಿಂದ ಮುಕ್ತವಾಗಿರುತ್ತದೆ ಹಾಗೂ ಸೋಂಕು ನಿರೋಧಕ ಅಂಶಗಳನ್ನು ಹೊಂದಿರುತ್ತದೆ ಎಂದರು.
  ಮಗುವಿಗೆ ಚೆನ್ನಾಗಿ ಎದೆಹಾಲು ಕುಡಿಸುವುದರಿಂದ ಮೊದಲ ಆರು ತಿಂಗಳ ಬಾಣಂತನದ ವೇಳೆ ಪರಿಣಾಮಕಾರಿಯಾಗಿ ಗರ್ಭಧರಿಸುವಿಕೆಯನ್ನು ತಡೆಗಟ್ಟುತ್ತದೆ ಎಂದು ಹೇಳಿದರು.ಎದೆಹಾಲು ಕುಡಿಸುವ ತಾಯಂದಿರು ನಡವಳಿಕೆ ಮತ್ತು ವರ್ತನೆಗಳಿಗೆ ಸಂಬಂಧಿಸಿದಂತೆ ತಮ್ಮ ಶಿಶುಗಳೊಂದಿಗೆ ಉತ್ತಮವಾಗಿ ಹೊಂದಿಕೊಳ್ಳುತ್ತಾರೆ ಎಂದರು.
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಂಜುನಾಥ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ನಂತರ ಶಾಲಾ ಮಕ್ಕಳಿಗೆ ಹಾಲನ್ನು ವಿತರಿಸಲಾಯಿತು. ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎಂ.ಎ.ಅತ್ತಾರ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಚೆನ್ನಮ್ಮ, ಗ್ರಾಮ ಪಂಚಾಯಿತಿ ಸದಸ್ಯ ನಾಗರಾಜ, ವೈದ್ಯಾಧಿಕಾರಿ ಡಾ. ಆಲನ್ ಜೋ ರೋಡ್ರಿಗ್ಸ್, ಅಂಗನವಾಡಿ ಕಾರ್ಯಕರ್ತೆ ನಾಗಮ್ಮ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement