ಎದೆ ಹಾಲು ಅಮೃತಕ್ಕೆ ಸಮಾನ
ಚಳ್ಳಕೆರೆ: ಹುಟ್ಟಿದ ಕೂಡಲೆ ಮಗುವಿಗೆ ತಾಯಿ ಎದೆ ಹಾಲು ಕುಡಿಸಿದಲ್ಲಿ ಮಗು ಆರೋಗ್ಯಕರವಾಗಿ ಬೆಳೆಯುತ್ತದೆ ಎಂದು ಇಲ್ಲಿನ ಸಿವಿಲ್ನ್ಯಾಯಾಲದ ಹಿರಿಯ ನ್ಯಾಯಧೀಶೆ ಸುವರ್ಣ ಕೆ ಮಿರ್ಜಿ ತಿಳಿಸಿದರು.
ನ್ಯಾಯಾಲಯದ ಆವರಣದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹದ ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ತಾಯಿ ಪ್ರತಿ ಹಂತದಲ್ಲಿಯೂ ಮಗುವನ್ನು ಎಚ್ಚಕೆಯಿಂದ ಸಾಕುತ್ತಾಳೆ ಎಂದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಸಿ.ಎಲ್. ಪಾಲಾಕ್ಷ ಮಾತನಾಡಿ, ಪ್ರತಿವರ್ಷ ಆಗಸ್ಟ್ ತಿಂಗಳಲ್ಲಿ ಕಾರ್ಯಕ್ರಮವನ್ನು ಇಲಾಖೆ ಆಯೋಜಿಸುತ್ತದೆ. ಜನಿಸಿದ ಆರು ತಿಂಗಳು ಮಗು ಎದೆ ಹಾಲು ಕುಡಿದಲ್ಲಿ ಉತ್ತಮ ಆರೋಗ್ಯವಂತನಾಗಿರಲು ಸಾಧ್ಯ ಎಂದರು.
ಸಿಡಿಪಿಒ ಕೆ. ಗಿರಿಜಾಂಬ ಮಾತನಾಡಿದರು. ಜೆಎಂಎಫ್ಸಿ ನ್ಯಾಯದೀಶರಾದ ಬಿ. ದೀಲಿಪ್ ಕುಮಾರ್, ಸರ್ಕಾರಿ ಅಬಿಯೋಜಕ ಬಸವರಾಜು, ಬಿಇಒ ತಿಮ್ಮಣ್ಣ ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಕೀಲರ ಸಂಘದ ಅಧ್ಯಕ್ಷ ಕೆ.ಬಿ. ಪ್ರಬಾಕರ ವಹಿಸಿದ್ದರು.