ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಜಿಲ್ಲೆಯಾದ್ಯಂತ ರಂಜಾನ್ ಆಚರಣೆ

Vishwanath S
Updated On : 10 Aug 2013, 12:19 pm

ಶಿರಾಳಕೊಪ್ಪ: ಪಟ್ಟಣದ ಮುಸ್ಲಿಮ್‌ರು ರಂಜಾನ್ ಹಬ್ಬವನ್ನು ಸಾಮೂಹಿಕವಾಗಿ ಅದ್ದೂರಿಯಿಂದ ಆಚರಣೆ ಮಾಡಿದರು.
 ಬೆಳಗ್ಗೆಯಿಂದಲೇ ಪಟ್ಟಣದ ಎಲ್ಲ ಮಸೀದಿಗಳಲ್ಲಿ ಪ್ರಾರ್ಥನೆ ಮಾಡಿ ನಂತರ 9ಗಂಟೆಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾವಿರಾರು ಮುಸ್ಲಿಮರು ಮೆರವಣಿಗೆಯಲ್ಲಿ ಸಾಗಿ ಸೊರಬ ರಸ್ತೆಯಲ್ಲಿರುವ ದರ್ಗದ ಎದುರು ಸಾಮೂಹಿಕವಾಗಿ ಪ್ರಾರ್ಥನೆ ನಡೆಸಿದರು.
 ಭಾರಿ ಮಳೆಯಿಂದ ಮೈದಾನವೆಲ್ಲ ಸಂಪೂರ್ಣ ಕೆಸರಾಗಿತ್ತು, ಕಳೆದ ಮೂರು ದಿನಗಳಿಂದ ಮಳೆ ಇಲ್ಲದ ಕಾರಣ ಮೈದಾನದಲ್ಲಿ ಹಾಗು ರಸ್ತೆ ಮೇಲೆ ಕುಳಿತು ಪ್ರಾರ್ಥನೆ ಮಾಡಿದರು ನಂತರ ಪರಸ್ಪರ ಶುಭಾಶಯ ಹಂಚಿಕೊಂಡರು.
ಬಿಗಿ ಪೊಲೀಸ್ ಬಂದೋಬಸ್ತ್: ರಂಜಾನ್ ಪ್ರಯುಕ್ತ ಪೊಲೀಸ್ ಇಲಾಖೆ ವಿಶೇಷ ಬಂದೋಬಸ್ತ್ ಏರ್ಪಡಿಸಿತ್ತು. ಸಿಪಿಐ ಮಾದಪ್ಪ, ಶಿರಾಳಕೊಪ್ಪ ಎಸ್‌ಐ ಗುರುಪ್ರಸಾದ್, ಸಿಬ್ಬಂದಿ ಶಾಂತವಾಗಿ ಹಬ್ಬನಡೆಯಲು ಸಹಕರಿಸಿದರು.
ಸೊರಬದಲ್ಲಿ...
ಸೊರಬ: ಪಟ್ಟಣದ ಸುನ್ನಿ ಜಾಮಿಯ ಮಸೀದಿಯಲ್ಲಿ ನೂರಾರು ಮುಸ್ಲಿಂರು ರಂಜಾನ್ ಹಬ್ಬದ ಪ್ರಯುಕ್ತ ವಿಶೇಷ ಪ್ರಾರ್ಥನೆ ಸಲ್ಲಿಸಿ, ಪರಸ್ಪರ ಶುಭಾಶಯ ವಿನಿಮಯಿಸಿಕೊಂಡರು.
 ಈ ಸಂದರ್ಭದಲ್ಲಿ ಕಳೆದ ಐದು ವರ್ಷಗಳಿಂದ ಸುನ್ನಿ ಜಾಮಿಯ ಮಸೀದಿ ಅಧ್ಯಕ್ಷರಾಗಿ ಸೇವೆಗೈದ ಸೈಯದ್ ಶಬ್ಬೀರ್ ಸಾಬ್ ಅವರಿಗೆ ಸಮಾಜದ ವತಿಯಿಂದ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿದ ಅವರು ಸಮಸ್ತ ಮುಸ್ಲಿಂ ಮತ್ತು ಹಿಂದೂಗಳಿಗೆ ಹಬ್ಬದ ಶುಭಾಶಯ ಕೋರಿದರು.
ಶಾಸಕ ಮಧು ಬಂಗಾರಪ್ಪ, ಮಾಜಿ ಸಚಿವ ಕುಮಾರ್ ಬಂಗಾರಪ್ಪ, ಜೆಡಿಎಸ್ ರಾಜ್ಯ ಕಾರ್ಯದರ್ಶಿ ಕುಮಾರ್ ಶುಭಾಷಯ ಸಂದೇಶ ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement